ಮೈಸೂರಿನ ವಿವಿಧೆಡೆ ಸೆ.18 ರಂದು ವಿದ್ಯುತ್ ವ್ಯತ್ಯಯ

Power cuts
Published on

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವಿವಿಧ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಸೆ.18 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಹೆಬ್ಬಾಳ್, ಕುಂಬಾರಕೊಪ್ಪಲು, ಟೋಲ್‌ಗೇಟ್, ವಾಣಿವಿಲಾಸ ಬಡಾವಣೆ, ಮಹದೇಶ್ವರ ಬಡಾವಣೆ, ಸುಭಾಷ್ ನಗರ, ಸೂರ್ಯ ಬೇಕರಿ, ವಿಜಯನಗರ, ರೈಲ್ವೆ ಬಡಾವಣೆ, ಅಭಿಷೇಕ್ ವೃತ್ತ, ಮಾದೇಗೌಡ ವೃತ್ತ, ಎಂ.ಜಿ.ಕೊಪ್ಪಲು, ಹೊರ ವರ್ತುಲ ರಸ್ತೆ, ಹಂಪಿ ವೃತ್ತ, ಸಂಗಮ್ ವೃತ್ತ, ಎಚ್‌ಪಿಸಿಎಲ್ ಗ್ಯಾಸ್, ಕೆಐಎಡಿಬಿ ಕೈಗಾರಿಕ ಹೌಸಿಂಗ್ ಲೇಔಟ್, ಎಲ್ ಆ್ಯಂಡ್ ಟಿ ಕಾರ್ಖಾನೆ, ರಾಣೆ ಮದ್ರಾಸ್, ಜೆ.ಕೆ. ಟೈರ್ಸ್‌, ಮೈಸೂರು ಸ್ಟೀಲ್ಸ್ ಇಎಚ್‌ಟಿ ಹಾಗೂ ಸಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹೆಬ್ಬಾಳ್ ಕೈಗಾರಿಕಾ ಪ್ರದೇಶ, ಮೇಟಗಳ್ಳಿ, ಬೃಂದಾವನ ಬಡಾವಣೆ, ಲೋಕನಾಯಕ ನಗರ, ಜಯದೇವ ನಗರ, ಬಿ.ಎಂ.ಶ್ರೀನಗರ, ಹೆಬ್ಬಾಳ್ ಹೊರ ವರ್ತುಲ ರಸ್ತೆ, ಹೆಬ್ಬಾಳ್ 1ನೇ, 2ನೇ ಹಾಗೂ 3ನೇ ಹಂತ, ಸುಬ್ರಹ್ಮಣ್ಯನಗರ, ಬಸವನಗುಡಿ, ಎಸ್‌ಬಿಎಂ ಬ್ಯಾಂಕ್, ಹೆಬ್ಬಾಳ್ ಕಾಲೋನಿ, ಹೆಬ್ಬಾಳ್ ಮುಖ್ಯರಸ್ತೆ, ಲಕ್ಷ್ಮೀಕಾಂತನಗರ, ಸಂಕ್ರಾಂತಿ ವೃತ್ತ, ಗೋಲ್ಡನ್ ಬೇಕರಿ, ಕೆಐಎಡಿಬಿ ಬಡಾವಣೆ, ಮಯೂರ ವೃತ್ತ, ಕಾವೇರಿ ವೃತ್ತ, ಮಿಲಿಟರಿಕ್ವಾಟ್ರಸ್, ಆರ್‌ಬಿಐ, ವಿಕ್ರಾಂತ್ ಕಾರ್ಖಾನೆ, ಶಿವಮೊಗ್ಗ ಸ್ಟೀಲ್ಸ್, ಬೆಳಗೊಳ ಕೈಗಾರಿಕಾ ಪ್ರದೇಶ, ಕೆಆರ್‌ಎಸ್ ರಸ್ತೆ, ಭೈರವೇಶ್ವರನಗರ, ಬಸವೇಶ್ವರನಗರ, ಮೇಟಗಳ್ಳಿ ಕೈಗಾರಿಕ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಕೂರ್ಗಳ್ಳಿ ಕೈಗಾರಿಕ ಪ್ರದೇಶ, ಎಕ್ಸೆಲ್ ಪಬ್ಲಿಕ್ ಶಾಲೆ, ವಿನ್ಯಾಸ್, ಕೂರ್ಗಳ್ಳಿ ಕೆರೆ, ಗೋಪಾಲನ್ ಕಾಂಪೌಂಡ್, ವಿಪ್ರೊ, ಮೆರಿಟಾರ್, ಪಟ್ಟಾಬಿ ಎಂಟರ್‌ಪ್ರೈಸಸ್, ಮಿಲೆನಿಯಮ್, ಎಲ್ಟಿ, ಮಾರ್ಕ್ ಬ್ಯಾಟರಿಸ್‌ರಸ್ತೆ, ಚಾಮುಂಡಿ ಸಿಲ್ಕ್ಸ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net