ಮೈಸೂರಿನ ವಿವಿಧೆಡೆ ಜೂ.7 ರಂದು ವಿದ್ಯುತ್ ವ್ಯತ್ಯಯ

Power cutt
Published on

ಮೈಸೂರು: ಇಲವಾಲ ಮತ್ತು ಬೋಗಾದಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ 1ನೇ ತ್ರೈಮಾಸಿಕ ನಿರ್ವಹಣಾ ಕೆಲಸದ ನಿಮಿತ್ತ ಜೂ. 07 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಇಲವಾಲ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಇಲವಾಲ, ಹಳೇ ಕಾಮನಕೊಪ್ಪಲು, ಮೈದನಹಳ್ಳಿ, ಮೇಗಳಾಪುರ, ಭದ್ರೇಗೌಡನಕೊಪ್ಪಲು, ಚಿಕ್ಕೆಗೌಡನಕೊಪ್ಪಲು, ಹೊಸಕೋಟೆ, ಸರಕಟ್ಟೆ, ಯಾಚೇಗೌಡನಹಳ್ಳಿ, ದಡಕನಹಳ್ಳಿ, ರಾಮೇನಹಳ್ಳಿ, ಯಡಹಳ್ಳಿ, ಕಲ್ಲೂರು, ನಾಗನಹಳ್ಳಿ, ಗುಂಗ್ರಾಲ್‌ಛತ್ರ, ಛತ್ರದಕೊಪ್ಪಲು, ರಟ್ನಳ್ಳಿ, ವೀರಪ್ಪನಕೊಪ್ಪಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಬೋಗಾದಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಜನತಾನಗರ, ಬೋಗಾದಿ 2ನೇ ಹಂತ ಉತ್ತಮ ಮತ್ತು ದಕ್ಷಿಣ, ಗಂಗೋತ್ರಿ ಆವರಣ, ಗಂಗೋತ್ರಿ ಕ್ವಾಟ್ರಸ್, ದಾಸನಕೊಪ್ಪಲು, ಮರಟಿಕ್ಯಾತನಹಳ್ಳಿ, ರೂಪನಗರ, ದೀಪಾನಗರ, ಬೋಗಾದಿ ಗ್ರಾಮ, ಪ್ರೀತಿ ಬಡಾವಣೆ, ಆರ್‌ಎಂಪಿ ಬಡಾವಣೆ, ವಿಜಯನಗರ 3ನೇ ಹಂತ, ಹಿನಕಲ್, ವಿಜಯನಗರ 4ನೇ ಹಂತ, ವಿಜಯಶ್ರೀಪುರ, ಸುಧಾ ಬಡಾವಣೆ, ರೈಲ್ವೆ ಬಡಾವಣೆ, ಎಸ್‌ಬಿಎಂ ಬಡಾವಣೆ, ವಾಗ್ದೇವಿನಗರ, ಸಿಎಫ್‌ಟಿಆರ್ ಬಡಾವಣೆ, ಮೈಸೂರು ವಿಶ್ವ ವಿದ್ಯಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net