ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

111222
Published on

ಬಳ್ಳಾರಿ : ಬಳ್ಳಾರಿ ನಗರ ಜೆಸ್ಕಾಂ ವ್ಯಾಪ್ತಿಯಲ್ಲಿ ಎಫ್-8 ಫೀಡರ್‌ನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಲಿಂಕ್‌ಲೈನ್ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಜು.20 ರಂದು ಬೆಳಗ್ಗೆ 10 ರಿಂದ ಸಂಜೆ 06 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂನ ಸಹಾಯಕ ಇಂಜಿನಿಯರ್ ಅಶೋಕ ರೆಡ್ಡಿ ಅವರು ತಿಳಿಸಿದ್ದಾರೆ.

ಬಸವೇಶ್ವರ ನಗರ, ಎಂ.ಆರ್.ವಿ. ಲೇಔಟ್, ಸದ್ಗುರು ಕಾಲನಿ, ರೇಣುಕಾಚಾರ್ಯ ನಗರ, ಅಲ್ಲಂ ಲೇಔಟ್, ಬಿ.ಎಂ.ಎಸ್. ಲೇಔಟ್, ತಿರುಮಲ ಲೇಔಟ್, ಹರಿಪ್ರಿಯ ನಗರ, ಸುಷ್ಮಸ್ವರಾಜ್ ಕಾಲನಿ, ನಿಜಲಿಂಗಪ್ಪ ಕಾಲನಿ, ಲಲಿತಾ ಲೇಔಟ್, ಗೊಲ್ಲರ ನರಸಪ್ಪ ಕಾಲನಿ, ರಾಘವೇಂದ್ರ ಕಾಲನಿ 2ನೇ ಹಂತ, ದೀಪಕ್ ಕಾಲನಿ, ಕೆವಿಟಿ ನಗರ, ವೆಂಕಟೇಶ್ವರ ನಗರ, ಅನಂತಪುರರಸ್ತೆ, ಶೇಕ್ಷೆವಲ್ಲಿ ದುರ್ಗಾ, ಕುಬೇರ ಲೇಔಟ್, ಆಟೋ ನಗರ, ಎಸ್.ಆರ್.ಎಂ. ಲೇಔಟ್ ಕನಕದಾಸ ನಗರ, ಕೆಎಐಡಿಬಿ ಕೈಗಾರಿಕಾ ಪ್ರದೇಶ., ಸಂಗನಕಲ್ಲು ಗ್ರಾಮ, ವಾಟರ್ ಬೂಸ್ಟರ್, ಮೋಕಾ ವಾಟರ್ ವರ್ಕ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net