22ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

no_electricity
Published on

ಯಳಂದೂರು: ಯಳಂದೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಫೆ.22ರಂದು ವಿದ್ಯುತ್ ವ್ಯತ್ಯಯವಾಗಲಿದೆ.

ಪಟ್ಟಣ ಹಾಗೂ ಮಾಂಬಳ್ಳಿ ಗ್ರಾಮದಲ್ಲಿರುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ನಿರ್ವಹಣೆಯನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಇವೆರಡೂ ಕೇಂದ್ರಗಳ ವ್ಯಾಪ್ತಿಗೆ ಒಳಪಡುವ ಯಳಂದೂರು ಪಟ್ಟಣ, ಯರಿಯೂರು, ಮದ್ದೂರು, ಆಲ್ಕೆರೆ ಅಗ್ರಹಾರ, ಬೂದಿತಿಟ್ಟು, ಎ. ದೇವರಹಳ್ಳಿ, ಟಿ. ಹೊಸೂರು, ಶಿವಕಹಳ್ಳಿ, ಅಗರ, ಮಾಂಬಳ್ಳಿ, ಬನ್ನಿಸಾರಿಗೆ, ವೈ.ಕೆ. ಮೋಳೆ, ಹೆಗ್ಗಡೆಹುಂಡಿ, ಗುಂಬಳ್ಳಿ, ಯರಗಂಬಳ್ಳಿ, ಬಿಳಿಗಿರಿರಂಗನಬೆಟ್ಟ, ಗೌಡಹಳ್ಳಿ, ಗಣಿಗನೂರು, ವಡಗೆರೆ, ಕೊಮಾರನಪುರ ಸೇರಿದಂತೆ ಇತರ ಗ್ರಾಮಗಳಲ್ಲಿ ವಿದ್ಯುತ್ ಸೆ.22ರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್‌ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಲಿಂಗರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net