

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ 110 ಕೆ.ವಿ. ಲಕಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿAದ ಸರಬರಾಜಾಗುವ 11 ಕೆ.ವಿ. ವೆಂಕಟೇಶ್ವರ ಫೀಡರ್ ಮಾರ್ಗದಲ್ಲಿ ಜು. 23ರಂದು ತುರ್ತು ಪಾಲನಾ ಕಾಮಗಾರಿ ಕೈಗೊಳ್ಳಲಾಗುತ್ತದೆ. ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಶಾಕಾಂಬರಿ ನಗರ, ಗುರುದೇವ ನಗರ, ಸಾರಸ್ವತಪುರ, ಮಸಾಲಗರ ಓಣಿ, ರಜತಗಿರಿ ವಾಟರ್ ಟ್ಯಾಂಕ್, ಕಲಘಟಗಿ ರಸ್ತೆ, ಟೋಲ್‌ನಾಕಾ, ಮಾಳಮಡ್ಡಿ, ಸನ್ಮತಿ ಮಾರ್ಗ, ಲಕ್ಷ್ಮೀಸಿಂಗನಕೇರಿ, ನಗರಕರ ಕಾಲನಿ, ಮಹಿಷಿ ರಸ್ತೆ, ರಾಯಚೂರ ಲೇಔಟ್, ಶಾಂತಿ ನಗರ, ಜಿಲ್ಲಾ ಪಂಚಾಯಿತಿ ಕಚೇರಿ, ತಹಸೀಲ್ದಾರ್ ಕಚೇರಿ, ರೈಲ್ವೆ ಸ್ಟೇಷನ್ ರಸ್ತೆ, ಗೌಳಿ ಗಲ್ಲಿ, ರಾಯರ ಮಠ, ಕಬ್ಬೂರ ರಸ್ತೆ, ಗೋಪಾಲಪುರ, ಯಮ್ಮಿಕೇರಿ, ಜನ್ನತ ನಗರ, ಶಿವಾನಂದ ನಗರ, ಮಿಷನ್ ಕಾಂಪೌ0ಡ್ ಸುತ್ತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.