110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ

202106290041209245_Power-shutdown-from-9-am-today_SECVPF
Published on

ಧಾರವಾಡ: ತಾಲೂಕಿನ 110 ಕೆ.ವಿ. ಶೇಡಬಾಳ ಖಾನಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆ. 12ರಂದು ಕೆಪಿಟಿಸಿಎಲ್‌ನಿಂದ 2ನೇ ತ್ರೆÊಮಾಸಿಕ ತುರ್ತುಪಾಲನಾ ಕಾಮಗಾರಿ ಕೈಗೊಳ್ಳಲಾಗುತ್ತದೆ. ಅಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಗರಗ, ಹಂಗರಕಿ, ದುಬ್ಬದಮರಡಿ, ಅಗಸನಹಳ್ಳಿ, ಶೇಡಬಾಳ ಖಾನಾಪುರ, ತಡಕೊಡ, ಮಾದನಭಾವಿ, ಮುಗಳಿ, ಹೊಸೆಟ್ಟಿ, ಬೋಗೂರ, ಜೀರಗಿವಾಡ ಮತ್ತು ಕೊಟಬಾಗಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net