

ರೋಣ: ರೋಣ ಮತ್ತು ಬೆಳವಣಕಿ ವಿದ್ಯುತ್ ಉಪಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕೈಗೊಳ್ಳುವುದರಿಂದ ಫೆ. 25ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ರೋಣ, ಕೃಷ್ಣಾಪುರ, ಹೊಸಳ್ಳಿ, ಜಿಗಳೂರ, ಕುರಹಟ್ಟಿ, ಮುದೇನಗುಡಿ, ಹುಲ್ಲೂರ, ಸೋಮನಕಟ್ಟಿ , ಬೆಳವಣಕಿ ಉಪಕೇಂದ್ರದ ವ್ಯಾಪ್ತಿಯ ಸವಡಿ, ಹೊನ್ನಾಪುರ, ಬೆಳವಣಕಿ, ಚಿಕ್ಕಮಣ್ಣೂರ, ಸಂದಿಗವಾಡ, ಅರಹುಣಸಿ, ಮಲ್ಲಾಪುರ, ಬಾಸಲಾಪುರ, ಹಿರೇಮಣ್ಣೂರ, ಯಾವಗಲ್ಲ, ಯಾ.ಸ. ಹಡಗಲಿ, ಕೌಜಗೇರಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.