

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಬೇಲೂರು 110 /33/ 11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾ. 16ರಂದು 4ನೇ ತ್ರೈಮಾಸಿಕ ಕಾರ್ಯ ಕೈಗೊಳ್ಳಲಾಗುತ್ತದೆ. ಅಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ 33 ಕೆ.ವಿ. ಮಾರ್ಗಗಳಾದ ಯುಎಎಸ್, ಗೋವಾ ಮಿಲ್ಡರ್ಸ್, ಟಾಟಾ 1 ಮತ್ತು 2, ಯುಡಿಎಲ್, ಸದರ್ನ್ ಪೇರೊ , 11 ಕೆ.ವಿ ಮಾರ್ಗಗಳಾದ ತೇಗೂರ, ಇಂಡಸ್ಟಿçಯಲ್ ಏರಿಯಾ, ಗಣೇಶ ಅನುಗ್ರಹ, ಟೀನಾ, ಮಾಡೆಲ್ ಬಕೆಟ್, ಹೈಕೋರ್ಟ್, ಐಐಟಿ, ಟೆಲ್ಕೋ, ತಡಕೋಡ, ಗರಗ, ಮಾದನಭಾವಿ, ಮಂಡಿಹಾಳ, ಹೊಸೆಟ್ಟಿ, ದುರ್ಗದಕೇರಿ ಹಾಗೂ ಬೋಗೂರು ಫೀಡರ್ ವ್ಯಾಪ್ತಿಯ ಸುತ್ತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.