

ವಿಜಯವಾಣಿ ಸುದ್ದಿಜಾಲ ಧಾರವಾಡ
ಮೃತ್ಯುಂಜಯನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೇ 13ರಂದು ತುರ್ತು ಪಾಲನಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಮುರುಘಾಮಠ, ಮದಿಹಾಳ, ಪತ್ರೇಶ್ವರನಗರ, ರಾಜನಗರ, ಹಾವೇರಿಪೇಟ, ಸವದತ್ತಿ ರಸ್ತೆ, ಕಾಮನಕಟ್ಟಿ, ಹೆಬ್ಬಳ್ಳಿ ಅಗಸಿ, ಮಣಕಿಲ್ಲಾ, ಗಾಂಧಿಚೌಕ, ಸೂಪರ್ ಮಾರ್ಕೆಟ್, ಸುಭಾಷ ರಸ್ತೆ, ಶಿವಾಜಿ ರಸ್ತೆ, ಮರಾಠಾ ಕಾಲನಿ, ಕಮಲಾಪುರ, ಕಲಾಭವನ, ಕರಡಿಗುಡ್ಡ, ಕವಲಗೇರಿ, ಮಂಗಳಗಟ್ಟಿ, ಅಮ್ಮಿನಭಾವಿ, ಮುಕ್ತಿಧಾಮ, ಕೋಳಿಕೇರಿ, ಬಾರಾ ಇಮಾಮ್ ಗಲ್ಲಿ, ಕಂಪ್ಲಿ ಬಸವೇಶ್ವರ ನಗರ, ಮಂಗಳವಾರ ಪೇಟ, ವಿನಾಯಕ ನಗರ, ಶಾಂತಿ ಕಾಲನಿ, ಶಾಸ್ತ್ರಿನಗರ, ಲೈನ್ ಬಜಾರ್, ಕೆಂಪಗೇರಿ, ರಾಮನಗರ, ಮಾರುತಿ ದೇವಸ್ಥಾನ, ಕಿಟಲ್ ಕಾಲೇಜ್, ಜನ್ನತ್ ನಗರ, ಸಿಬಿಟಿ, ಅಂಜುಮನ್ ಕಾಲೇಜ್, ಲಕಮಾಪುರ, ಮುಳಮುತ್ತಲ, ಮರೇವಾಡ, ತಿಮ್ಮಾಪುರ, ಕವಲಗೇರಿ, ಚಂದನಮಟ್ಟಿ, ತಲವಾಯಿ, ವನಹಳ್ಳಿ, 110ಕೆವಿ ಹೆಬ್ಬಳ್ಳಿ ವಿದ್ಯುತ್ ವಿತರಣಾ ಕೇಂದ್ರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.