ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

load_shedding_0
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಗ್ರಾಮೀಣ ಉಪ ವಿಭಾಗ ವ್ಯಾಪಿಯ ಧುಮ್ಮವಾಡ 33/11 ಕೆವಿ ಉಪ್ಪಿನಬೆಟಗೇರಿ ಮತ್ತು 33 ಕೆವಿ ಅಮ್ಮಿನಬಾವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ. 13ರಂದು ಬೆಳಗ್ಗೆ 10ರಿಂದ 14ರ ರಾತ್ರಿ 10ರವರೆಗೆ ಉಪ್ಪಿನಬೆಟಗೇರಿ, ಕಲ್ಲೂರ, ಕೊಟಬಾಗಿ, ಜೀರಗಿವಾಡ, ಲೋಕೂರ, ಕುರುಬಗಟ್ಟಿ, ಶಿಬಾರಗಟ್ಟಿ, ಯಾದವಾಡ, ಹಾರೋಬೇಳವಡಿ, ಕಬ್ಬೇನೂರ, ಕಲ್ಲೆ ಮತ್ತು ಹನುಮನಾಳ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net