

ವಿಜಯವಾಣಿ ಸುದ್ದಿಜಾಲ ಧಾರವಾಡ
ದಾಸ್ತಿಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನ. 21ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ತ್ರೈ ಮಾಸಿಕ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ದಾಸ್ತಿಕೊಪ್ಪ, ಕಲಘಟಗಿ, ಹಿರೇಹೊನ್ನಳ್ಳಿ, ಹುಲ್ಲಂಬಿ, ಬಿಸರಳ್ಳಿ, ಗಳಗಿನಗಟ್ಟಿ, ಕಾಮಧೇನು, ರಾಮನಾಳ, ಹರೋಗೇರಿ, ಮಡಕಿಹೊನ್ನಳ್ಳಿ, ಬಗಡಗೇರಿ, ಹಿಂಡಸಗೇರಿ, ಮಲಕನಕೊಪ್ಪ, ಜಿನ್ನೂರ್, ಹುಣಸಿಕಟ್ಟಿ, ಬಿದರಗಡ್ಡಿ, ಬೆಲವಂತರ, ಶಿವನಾಪುರ, ಹನಮಾಪುರ, ಮುಕ್ಕಲ, ಬಮ್ಮಿಗಟ್ಟಿ, ಆಲದಕಟ್ಟಿ, ತಾವರಗೇರಿ, ಅರಳಿಹೊಂಡ, ನೆಲ್ಲಿಹರವಿ, ತಬಕದಹೊನ್ನಳ್ಳಿ, ಬಿರವಳ್ಳಿ, ಬೆಂಡಲಗಟ್ಟಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.