ಕುಶಾಲನಗರದಲ್ಲಿ ವಿದ್ಯುತ್ ವ್ಯತ್ಯಯ

Power Cut
Published on


ಕುಶಾಲನಗರ: ಕುಶಾಲನಗರ 230/ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹಾದು ಹೋಗುವ ಫೀಡರ್‌ಗಳ ಮಾರ್ಗದಲ್ಲಿ ತುರ್ತಾಗಿ ಹೊಸ ಎಂಐಡಿ ಅಭಿವೃದ್ಧಿ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮೇ 5ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುತ್ತಿದೆ. ಸೋಮೇಶ್ವರ ಫೀಡರ್ ವ್ಯಾಪ್ತಿಯ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಜನತಾ ಕಾಲೋನಿ, ಹಾರಂಗಿ ರಸ್ತೆ, ಗೋಪಾಲ್ ಸರ್ಕಲ್ ಮತ್ತು ಎಫ್ 2 ಕಾವೇರಿ ಕೆಐಎಡಿಬಿ ವ್ಯಾಪ್ತಿಯ ಕೂಡ್ಲೂರು, ಕೂಡಿಗೆ, ಕೈಗಾರಿಕಾ ಬಡಾವಣೆ ಹಾಗೂ ಎಫ್ 6 ಕೂಡಿಗೆ ವ್ಯಾಪ್ತಿಯ ವೀರಭೂಮಿ ಸರ್ಕಲ್, ಹಳೇ ಕೂಡಿಗೆ, ಚಿಕ್ಕತ್ತೂರು, ದೊಡ್ಡತ್ತೂರು, ಬಸವನತ್ತೂರು, ಕೂಡುಮಂಗಳೂರು, ಕೂಡ್ಲೂರು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಎಸ್.ಮಂಜುನಾಥ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net