

ಪುತ್ತೂರು: ಉಡುಪಿ-ಕಾಸರಗೋಡು ೪೦೦ಕೆವಿ ವಿದ್ಯುತ್ ಪ್ರಸರಣ ಮಾರ್ಗ ರಚನೆಗೆ ವಿರೋಽಸಿ ಇಂಧನ ಸಚಿವ ಕೆ.ಜೆ. ಅವರನ್ನು ಸಂತ್ರಸ್ತ ರೈತರು ಹಾಗೂ ಹೋರಾಟ ಸಮಿತಿ ಪದಾಽಕಾರಿಗಳು ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಸಚಿವರು ಮತ್ತು ಕಂಪನಿಯವರು ಯೋಜನೆಯನ್ನು ಸಮರ್ಥಿಸಿಕೊಂಡಾಗ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಯೋಜನೆ, ರಾಜ್ಯ ಸರಕಾರ ಏನೂ ಮಾಡಲು ಸಾಧ್ಯವಿಲ್ಲವೆಂದು ಜಾರಿಕೊಳ್ಳುವ ಪ್ರಯತ್ನವೂ ಸಚಿವರಿಂದ ನಡೆಯಿತು.
ಶೀಘ್ರದಲ್ಲಿ ಇಂಧನ ಸಚಿವರು, ಸ್ಥಳೀಯ ಶಾಸಕರು ಮತ್ತು ಭೂಮಾಲೀಕರ ಪ್ರತಿನಿಽಗಳು ಸೇರಿ ದೆಹಲಿಗೆ ತೆರಳಿ ಕೇಂದ್ರ ಇಂಧನ ಸಚಿವರು ಮತ್ತು ಸಚಿವಾಲಯದ ಉನ್ನತ ಅಽಕಾರಿಗಳನ್ನು ಭೇಟಿ ಮಾಡಿ ಪರ್ಯಾಯ ಮಾರ್ಗದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ತೀರ್ಮಾನಕ್ಕೆ ಬರಲಾಯಿತು.
ಯೋಜನಾ ವ್ಯಾಪ್ತಿಯ ಶಾಸಕರಾದ ಅಶೋಕ್ ಕುಮಾರ್ ರೈ, ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಇಂಧನ ಸಚಿವಾಲಯದ ಅಽಕಾರಿಗಳು, ಉಡುಪಿ ಮತ್ತು ದ.ಕ ಜಿಲ್ಲಾಽಕಾರಿಗಳು ಸಮ್ಮುಖದಲ್ಲಿ ಸುದೀರ್ಘ ೩ ಗಂಟೆಗಳ ಕಾಲ ಚರ್ಚೆ ನಡೆಸಲಾಯಿತು.
ಕಾರ್ಕಳ ಕಿಸಾನ್ ಸಂಘದ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ವಿಟ್ಲ ಹೋರಾಟ ಸಮಿತಿಯ ಶ್ಯಾಮ್ ವನಭೋಜನ, ಚಿತ್ತರಂಜನ್ ಎನ್.ಎಸ್.ಡಿ., ಸಂತ್ರಸ್ತರಾದ ಕೃಷ್ಣಪ್ರಸಾದ್ ತಂತ್ರಿ, ಅಲ್ಪಾನ್ಸ್ ನಿಡ್ಡೋಡಿ, ಸಂತೋಷ್ ಡಿಸೋಜ ಬಜ್ಪೆ, ಪಾಲ್ ರೋಲಿ ಡಿ ಕೋಸ್ಟಾ ಮತ್ತಿತರರು ಹಾಜರಿದ್ದರು.
ಜಿಲ್ಲಾವಾರು ಆಯ್ಕೆ ಅಗತ್ಯ
ಪುತ್ತೂರಿನಲ್ಲಿ ಈಗಾಗಲೇ ಮೆಸ್ಕಾಂ ಪವರ್‌ಮ್ಯಾನ್‌ಗಳ ಆಯ್ಕೆ ಮಾಡುವಲ್ಲಿ ತರಬೇತಿಯನ್ನು ಕೂಡಾ ಆಯೋಜನೆ ಮಾಡಲಾಗಿದೆ. ರಾಜ್ಯವಾರು ಅರ್ಹತಾ ಪಟ್ಟಿಯನ್ನು ಮಾಡಿದಲ್ಲಿ ಅದರಿಂದ ಜಿಲ್ಲೆಗಳ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ. ಮೆಸ್ಕಾಂ ಪವರ್‌ಮ್ಯಾನ್‌ಗಳ ನೇಮಕಾತಿ ವೇಳೆ ಜಿಲ್ಲಾವಾರು ಆಯ್ಕೆ ಪ್ರಕ್ರಿಯೆ ನಡೆಸಿ ಆ ಮೂಲಕ ಅಭ್ಯರ್ಥಿಗಳನ್ನು ನೇಮಕಾತಿ ಮಾಡಬೇಕು ಎಂದು ಇಂಧನ ಸಚಿವರಿಗೆ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಮನವಿ ಮಾಡಿದರು.
ವಿದ್ಯುತ್ ಲೈನ್ ಹಾದುಹೋಗುವಲ್ಲಿ ಅನೇಕ ಕಡೆಗಳಲ್ಲಿ ಕೃಷಿಗೆ ಹಾನಿಯಾಗುತ್ತಿದೆ. ಲೈನ್ ಬದಲಾವಣೆ ಬಗ್ಗೆ ರೈತರು ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಿದ್ದರು. ಕೃಷಿಕರಿಗೆ ತೊಂದರೆಯಾಗದಂತೆ ಲೈನ್ ಹಾದು ಹೋಗುವ ಅಗತ್ಯವಿದ್ದು, ಈ ವಿಚಾರದಲ್ಲಿ ಸರ್ಕಾರದಿಂದ ಏನು ಕ್ರಮ ಕೈಗೊಳ್ಳಬೇಕಾಗಿದೆ?
| ಅಶೋಕ್ ಕುಮಾರ್ ರೈ
ಶಾಸಕ ಪುತ್ತೂರು