

ನೆಲಮಂಗಲ : ಸದಾಶಿವನಗರದ ನಗರ ಯೋಜನಾ ಪ್ರಾಧಿಕಾರದ ಕಾರ್ಯಾಲಯದಲ್ಲಿ ಸೋಮವಾರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಎಂ.ಕೆ.ನಾಗರಾಜು ಮತ್ತು ಸದಸ್ಯರಾದ ಬಿನ್ನಮಂಗಲ ವೆಂಕಟೇಶ್, ಅಂಜನಮೂರ್ತಿ, ಪ್ರಕಾಶ್ ಅಧಿಕಾರ ಸ್ವೀಕರಿಸಿದರು.
ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ೇತ್ರದಲ್ಲಿ ಕಾಂಗ್ರೆಸ್ಗೆ ನಿಷ್ಟೆ ಹಾಗೂ ಪ್ರಾಮಾಣಿಕವಾಗಿ ದುಡಿದವರಿಗೆ ಅಧಿಕಾರ ನೀಡಲಾಗಿದೆ. ಯೋಜನಾ ಪ್ರಾಧಿಕಾರದ ಮೂಲಕ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡಜನರು, ಕೂಲಿಕಾರ್ಮಿಕರು ಹಾಗೂ ರೈತರಿಗೆ ಬಹಳ ಉಪಯುಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಮಾದರಿ ೇತ್ರದ ಮಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಲಾಗುವುದು ಎಂದರು. ನೆ.ಯೋ.ಪ್ರಾಧಿಕಾರ ನೂತನ ಸದಸ್ಯ ಬಿನ್ನಮಂಗಲ ವೆಂಕಟೇಶ್ ಮಾತನಾಡಿ, ಅಧಿಕಾರ ಬಯಸಿ ಹೋದವನಲ್ಲ. ಪಕ್ಷವು ಸೂಕ್ಷ$್ಮವಾಗಿ ನನ್ನ ಕೆಲಸ ಗಮನಿಸಿ ಸ್ಥಾನ ನೀಡಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡುತ್ತದೆ ಎಂದರು. ನೆ.ಯೋ.ಪ್ರಾಧಿಕಾರ ನೂತನ ಸದಸ್ಯ ಪ್ರಕಾಶ್ ಮಾತನಾಡಿ, ಪಕ್ಷ ಬದಲಾವಣೆ ಮಾಡದೇ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದನ್ನು ಶಾಸಕರು ಗುರುತಿಸಿದ್ದು ಸಂತೋಷ ತಂದಿದೆ. ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯಕೊಡಿಸುವ ಕೆಲಸ ಪಕ್ಷದಿಂದ ಆಗುತ್ತಿದೆ ಎಂದರು.
ನೆ.ಯೋ.ಪ್ರಾಧಿಕಾರ ನೂತನ ಸದಸ್ಯ ಅಂಜನಮೂರ್ತಿ ಮಾತನಾಡಿ, ಕಾಂಗ್ರೆಸ್ನಲ್ಲಿ ಎಲೆಮರೆಯಾಗಿ ಸೇವೆ ಸಲ್ಲಿಸಿದ್ದ ವ್ಯಕ್ತಿಗಳನ್ನು ಗುರಿತಿಸಿ ಯೋಜನೆ ಪ್ರಾಧಿಕಾರದ ಸದಸ್ಯರಾಗಿ ಆಯ್ಕೆ ಮಾಡಿದ್ದ ಶಾಸಕ ಎನ್.ಶ್ರೀನಿವಾಸ್ ಅವರಿಗೆ ಧನ್ಯವಾದಗಳು. ಶಾಸಕ ಎನ್.ಶ್ರೀನಿವಾಸ್ ಅವರು ಅಭಿವೃದ್ಧಿ ಕಾರ್ಯಕ್ಕೆ ಮತ್ತಷ್ಟು ಕೈ ಬಲ ಪಡಿಸುವ ಕಾರ್ಯವನ್ನು ಯೋಜನಾ ಪ್ರಾಧಿಕಾರದಿಂದ ಮಾಡಲಾಗುವುದು ಎಂದರು.
ಯೋಜನಾಬದ್ಧ ನಗರ ನಿರ್ಮಾಣಕ್ಕೆ ಶ್ರಮ : ನೆ.ಯೋ.ಪ್ರಾಧಿಕಾರ ನೂತನ ಅಧ್ಯಕ್ಷ ಎಂ.ಕೆ.ನಾಗರಾಜು ಮಾತನಾಡಿ, ೇತ್ರದ ಶಾಸಕರು ಹಾಗೂ ಮುಖಂಡರ ಪ್ರಯತ್ನ ಜತೆಗೆ ಕಾಂಗ್ರೆಸ್ನಲ್ಲಿ ಸಲ್ಲಿಸಿದ್ದ ಅಳಿಲು ಸೇವೆ ಗುರುತಿಸಿ ಯೋಜನಾ ಪ್ರಾಧಿಕಾರದ ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿದೆ. ಪ್ರಾಧಿಕಾರದಲ್ಲಿ ಸಾಕಷ್ಟು ಮಂದಿ ಪಕ್ಷದ ಹಿರಿಯರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಶಾಸಕರ ಮಾರ್ಗದರ್ಶನದಲ್ಲಿ ಪಕ್ಷದ ಹಿರಿಯ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರ ಪಡೆದು ಯೋಜನಾಬದ್ಧ ನಗರ ನಿರ್ಮಾಣಕ್ಕೆ ಶ್ರಮಿಸುತ್ತೇನೆ ಎಂದರು.
ಅಭಿನಂದನೆ : ಪದಗ್ರಹಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರು ಹಾಗೂ ಸದಸ್ಯರಿಗೆ ಶಾಸಕ ಎನ್.ಶ್ರೀನಿವಾಸ್ ಸೇರಿ ೇತ್ರದಿಂದ ಆಗಮಿಸಿದ್ದ ಬೆಂಬಲಿಗರು, ಸ್ನೇಹಿತರು ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದಿಸಿ ಶುಭಕೋರಿದರು. ನೆ.ಯೋ.ಪ್ರಾಧಿಕಾರ ನಿಟಕಪೂರ್ವ ಅಧ್ಯಕ್ಷ ಎಂ.ನಾರಾಯಣ್ಗೌಡ, ಸದಸ್ಯ ಬಿ.ಜಿ.ವಾಸು, ರಂಗಸ್ವಾಮಿ, ಪ್ರಕಾಶ್ಬಾಬು, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಬೂದಿಹಾಲ್ಮಂಜುನಾಥ್, ಸಿ.ಪ್ರದಿಪ್, ಹನುಮಂತೇಗೌಡ, ಶರ್ಮಾ, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲಿಟರಿ ಮೂರ್ತಿ, ಮುಖಂಡ ಸಿ.ಎಂ.ಗೌಡ, ಲ್ಮನಾರಾಯಣ, ಅಗಲಕುಪ್ಪೆ ಗೋವಿಂದರಾಜು, ಕೆಂಪರಾಜು, ವಸಂತ್, ಮುನಿರಾಜು, ಬಿ.ಕೆ.ತಿಮ್ಮರಾಜು, ಗೋವಿಂದರಾಜು, ಚಂದ್ರಕುಮಾರ್, ಮಂಜುನಾಥ್, ದೇವರಾಜು, ಮನುಗೌಡ ಉಪಸ್ಥಿತರಿದ್ದರು.