

ವಿಜಯವಾಣಿ ಸುದ್ದಿಜಾಲ ಧಾರವಾಡ
ತಬಕದಹೊನ್ನಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜೂ. 10ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ತುರ್ತು ಕಾಮಗಾರಿ ಕೈಗೊಳ್ಳುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ತಬಕದಹೊನ್ನಳ್ಳಿ, ಬಿರವಳ್ಳಿ, ಬೆಂಡಲಗಟ್ಟಿ, ಆಸ್ತಕಟ್ಟಿ, ನೆಲ್ಲಿಹರವಿ, ಮಲಕನಕೊಪ್ಪ, ಹುಣಸಿಕಟ್ಟಿ, ಬಿದರಗಡ್ಡಿ, ಗಂಜಿಗಟ್ಟಿ, ಸೊಲಾರಕೊಪ್ಪ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.