ವಿದ್ಯುತ ವ್ಯತ್ಯಯ

download
Published on

ಧಾರವಾಡ: ತಡಸಿನಕೊಪ್ಪ ವಿದ್ಯುತ್​ ವಿತರಣಾ ಕೇಂದ್ರದಲ್ಲಿ ಮೇ 29ರಂದು ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತ ತೆ ಮಾಸಿಕ ತುರ್ತುಪಾಲನಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅಂದು ಬೆಳೆಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ತಡಸಿನಕೊಪ್ಪ, ಜೋಗೆಲ್ಲಾಪುರ, ಇಟ್ಟಿಗಟ್ಟಿ, ಕೆಎಚ್​ಬಿ, ಉದಯಗಿರಿ, ವನಸಿರಿನಗರ, ರಾಜಾಜಿನಗರ, ಸತ್ತೂರ, ಆಶ್ರಯ ಕಾಲನಿ, ಎನ್​ಜಿಇಎ್​, ಎಸ್​ಡಿಎಂ ಮೆಡಿಕಲ್​ ಕಾಲೇಜು, ನವಲೂರ, ಸಂಜೀವಿನಿ ಪಾರ್ಕ್​, ರಾಯಾಪುರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net