

ವಿದ್ಯುತ್ ವ್ಯತ್ಯಯ
ವಿಜಯವಾಣಿ ಸುದ್ದಿಜಾಲ ಧಾರವಾಡ
ಉಪ್ಪಿನಬೆಟಗೇರಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲೇ ತ್ರೈ ಮಾಸಿಕ ಕಾರ್ಯ ಕೈಗೊಳ್ಳುವುದರಿಂದ ಆ. 2ರಂದು ಬೆಳಗ್ಗೆ 10 ಗಂಟೆಗೆಯಿಂದ ಸಂಜೆ 5ರವರೆಗೆ 11 ಕೆವಿ ಮಾರ್ಗಗಳಾದ ಲೋಕೂರ, ಕೊಟಬಾಗಿ, ಉಪ್ಪಿನಬೆಟಗೇರಿ, ಯಾದವಾಡ, ಕಬ್ಬೇನೂರ, ಹಾರೊಬೇಳವಡಿ, ಶಿಬಾರಗಟ್ಟಿ, ಪುಡಕಲಕಟ್ಟಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.