ವಿದ್ಯುತ್ ವ್ಯತ್ಯಯ

New Hescom New
Published on

ಹುಬ್ಬಳ್ಳಿ : ಇಲ್ಲಿನ ತಾರಿಹಾಳ ಮತ್ತು ಕೆಐಎಡಿಬಿ ಗಾಮನಗಟ್ಟಿಯ ವಿದ್ಯುತ್ ಉಪ ಕೇಂದ್ರದಲ್ಲಿ ಜೂ. 30ರಂದು 4ನೇ ತ್ರೖೆಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ತಾರಿಹಾಳ ಕೈಗಾರಿಕಾ ಪ್ರದೇಶ ಸ್ಟೇಜ್-1 ಮತ್ತು 2, ತಾರಿಹಾಳ ಗ್ರಾಮ, ಕೆಐಎಡಿಬಿ ಸ್ಟೇಜ್-1 ಮತ್ತು 2, ಗಾಮನಗಟ್ಟಿ ಕೈಗಾರಿಕಾ ಪ್ರದೇಶ, ಕೆಎಸ್​ಎಸ್​ಐಡಿಸಿ ಕೈಗಾರಿಕಾ ಪ್ರದೇಶ, ಜೋಡಳ್ಳಿ ಕ್ರಾಸ್​ನ ಫೈಜರ್ ಇಂಡಿಯಾ ಲಿಮಿಟೆಡ್, ಶಿರೂರ ಪಾರ್ಕ್, ಸಮರ್ಥ ಕಾಲೇಜ್, ಬೃಂದಾವನ ಲೇ-ಔಟ್, ಶ್ರೇಯಾ ಕಲ್ಲೂರ ಪ್ರಭಾತ ಕಾಲನಿ, ವಿದ್ಯಾನಗರ, ಜಯನಗರ, ತಿಮ್ಮ ಸಾಗರ ಗುಡಿ, ಕಲ್ಕಿ ನಗರ, ಜಗದೀಶ ನಗರ, ಬಂಜಾರ ಕಾಲನಿ, ಗೋಕುಲ ಗ್ರಾಮ, ಏರ್​ಪೋರ್ಟ್, ರಾಧಾಕೃಷ್ಣ ನಗರ, ದೇವಿ ನಗರ, ಗಾಂಧಿ ನಗರ, ಅರ್ಜುನ ವಿಹಾರ, ಅಶೋಕ ವನ, ಉಣಕಲ್ಲ, ಬದಾಮಿ ಓಣಿ, ಕಲ್ಯಾಣ ನಗರ, ಲಿಂಗರಾಜ ನಗರ, ಅತ್ತಿಗೇರಿ ಲೇ-ಔಟ್, ಗಣೇಶ ಕಾಲನಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net