

ವಿಜಯವಾಣಿ ಸುದ್ದಿಜಾಲ ಕೊಳ್ಳೇಗಾಲ
ಸತ್ತೇಗಾಲ 66 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಮಾ.16 ರಂದು ತ್ರೈಮಾಸಿಕ ಕಾರ್ಯ ಇರುವ ಕಾರಣ ವಿವಿಧ ಗ್ರಾಮಗಳಲ್ಲಿ ಅಂದು ವಿದ್ಯುತ್ ವ್ಯತ್ಯಯವಾಗಲಿದೆ. ಈ ಕೇಂದ್ರದಿಂದ ಹೊರಹೊಮ್ಮುವ 11 ಕೆವಿ ಫೀಡರ್‌ಗಳಾದ ಪಾಳ್ಯ ಐ.ಪಿ, ಉಗನೀಯ ಎನ್.ಜಿ.ವೈ, ಸತ್ತೇಗಾಲ ಐ.ಪಿ, ಯಡಕುರಿಯ ಎನ್.ಜಿ.ವೈ, ಸಿ.ಪಿ.ದೊಡ್ಡಿ ಐಪಿ, ಶಾಂತಿ ನಗರ ಐಪಿ, ಬೆಳಕವಾಡಿ ಐ.ಪಿಗಳಿಗೆ ವಿದ್ಯುತ್ ನಿಲುಗಡೆಯಾಗಲಿದೆ. ಹಾಗಾಗಿ ಈ ಫೀಡರ್‌ಗಳಿಗೆ ಒಳಪಡುವ ಗ್ರಾಮಗಳಾದ ಪಾಳ್ಯ, ಸಿ.ಪಿ.ದೊಡ್ಡಿ, ಸತ್ತೇಗಾಲ, ಧನಗೆರೆ, ಗುಂಡೇಗಾಲ, ಉಗನಿಯ, ಯಡಕುರಿಯ, ಸರಗೂರು, ಜಿನಕನಹಳ್ಳಿ, ಚೆಲುವನಹಳ್ಳಿ, ನರೀಪುರ, ಅಗ್ರಹಾರ, ಶಿವನ ಸಮುದ್ರ, ಹ್ಯಾಂಡ್ ಪೋಸ್ಟ್, ಜಾಗೇರಿ, ಶಾಂತಿನಗರ, ಹಳೇಕೋಟೆ, ಚನ್ನಿಪುರ ದೊಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ಎಂದಿನಂತೆ ಗ್ರಾಹಕರು ನಿಗಮದ ಜತೆ ಸಹಕರಿಸಬೇಕೆಂದು ಸೆಸ್ಕ್ ಎಇಇ ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.