

ಮೈಸೂರು: ಕಲಾಮಂದಿರ ವಿದ್ಯುತ್ ವಿತರಣಾ ಕೇಂದ್ರದಲ್ಲಿ 3ನೇ ತ್ರೈಮಾಸಿಕ ನಿರ್ವಹಣಾ ಕಾರ್ಯದ ಡಿ.12 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಸರಸ್ವತಿಪುರಂ 1 ರಿಂದ 5ನೇ ಮೇನ್, ನ್ಯೂಕಾಂತರಾಜ ಅರಸ್ ರಸ್ತೆ, ಕೆ,ಜಿ.ಕೊಪ್ಪಲು ಮುಖ್ಯರಸ್ತೆ, ಯುನಿವರ್ಸಿಟಿ ಕ್ವಾರ್ಟ್ರಸ್, ಮುಸ್ಲಿಂ ಹಾಸ್ಟೆಲ್, ವಿಶ್ವಮಾನವ ಜೋಡಿರಸ್ತೆ, ಮುರಗನ್ ಮೆಡಿಕಲ್ಸ್ನಿಂದ ಕುಕ್ಕರಹಳ್ಳಿ ಕೆರೆ ರಸ್ತೆವರೆಗೆ, ಸರಸ್ವತಿಪುರಂ 5 ರಿಂದ 16ನೇ ಮೇನ್, ಪಡುವಾರಹಳ್ಳಿ, ಜಿಲ್ಲಾಧಿಕಾರಿ ನಿವಾಸ, ಪ್ರಾದೇಶಿಕ ಆಯುಕ್ತರ ಕಚೇರಿ, ಸಿಎಫ್‌ಟಿಆರ್‌ಐ, ವಾಲ್ಮೀಕಿ ರಸ್ತೆ, ನ್ಯಾಯಾಧೀಶರ ವಸತಿ ಸಂಕೀರ್ಣ, ಒಂಟಿಕೊಪ್ಪಲು, ಹುಣಸೂರು ಮುಖ್ಯರಸ್ತೆ, ವಾಗ್ದೇವಿ ನಗರ, ಜೆ.ಸಿ ಕಾಲೇಜು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಚಾಮರಾಜ ಮೊಹಲ್ಲ, ಜಿಲ್ಲಾ ಪಂಚಾಯಿತಿ ಕಚೇರಿ, ನ್ಯಾಯಾಲಯ, ಅರಸುರಸ್ತೆ, ಜಿಲ್ಲಾಧಿಕಾರಿ ಹಳೆಯ ಕಚೇರಿ, ಮಹಾರಾಜ ಮತ್ತು ಯುವರಾಜ ಕಾಲೇಜು, ಶಿವರಾಂಪೇಟೆ, ದಿವಾನ್ಸ್ ರಸ್ತೆ, ಧನ್ವಂತರಿ ರಸ್ತೆ, ಜೆ.ಕೆ. ಮೈದಾನ, ಮೆಟ್ರೋಪೋಲ್, ಜೆ.ಎಲ್.ಬಿ ರಸ್ತೆ, ಜಯಲಕ್ಷ್ಮೀ ವಿಲಾಸ, ಏರ್‌ಲೈನ್ಸ್ ಹೊಟೇಲ್ ರಸ್ತೆ, ಮಹಾರಾಜ ವಿದ್ಯಾರ್ಥಿ ನಿಲಯ, ಗೀತಾರಸ್ತೆ, ರಾಮಸ್ವಾಮಿ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.