

ಹುಬ್ಬಳ್ಳಿ : ಗದಗ ರಸ್ತೆ 110/11 ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ 2 ನೇಯ ತೈಮಾಸಿಕ ನಿರ್ವಾಹಣಾ ಕಾರ್ಯ ಕೈಗೊಳ್ಳುಲಿರುವುದರಿಂದ ಸೆ. 2ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಗದಗ ರಸ್ತೆ, ರೈಲ್ವೆ ವರ್ಕ್ಶಾಪ್, ರೈಲ್ವೆ ಡೀಸೆಲ್ ಲೋಕೊ ಶೆಡ್, ವಿನೋಭಾ ನಗರ, ರೈಲ್ವೆ ಕಾಲನಿ, ಸರಸ್ವತಿಪುರಂ, ಕುಸುಗಲ್ ರಸ್ತೆ, ಆಕ್ಸಫರ್ಡ್ ಕಾಲೇಜ್, ಕ್ಯಾಪಿಟೋನಿಯ ಶಾಲೆ, ಶಿರಗುಪ್ಪಿ, ಬಂಡಿವಾಡ, ಮಂಟೂರ, ನಾಗರಹಳ್ಳಿ, ಮಧರ್ ಥೆರೇಸಾ ಕಾಲನಿ, ಆರ್.ಸಿ. ಕಾಲನಿ, ಚೇತನಾ ಕಾಲನಿ, 2ನೇ ಸ್ಟೇಜ್, ಚಾಲುಕ್ಯ ನಗರ, ಗಾಂಧಿವಾಡ ಕನ್ಯಾನಗರ, ವಿನೂತನ ಕಾಲನಿ, ಬೃಂದಾವನ ಕಾಲನಿ, ಕಿರೆಸೂರ ಕುಡಿಯುವ ನೀರು ಸರಬರಾಜು ಸ್ಥಾವರ ಮತ್ತು ಸುತ್ತ್ತನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.