ಹುಬ್ಬಳ್ಳಿಯ ಈ ಏರಿಯಾಗಳಲ್ಲಿ ಶುಕ್ರವಾರ ಕರೆಂಟ್ ಇರಾಂಗಿಲ್ಲ.....

POWER CUT NEW
Published on

ಹುಬ್ಬಳ್ಳಿ: ಇಲ್ಲಿನ ಗೋಪನಕೊಪ್ಪದ ವಿದ್ಯುತ್ ಉಪಕೇಂದ್ರದಲ್ಲಿ 2ನೇ ತ್ರೖೆಮಾಸಿಕ ನಿರ್ವಹಣೆ ಕೈಗೊಳ್ಳಲಿರುವುದರಿಂದ ಆ. 11 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಜ್ಯೋತಿ ಕಾಲನಿ, ತಾಜ ನಗರ, ಅಂಬಿಕಾ ನಗರ, ಏಕತಾ ನಗರ, ತಹಶೀಲ್ದಾರ್ ಕಾಲನಿ, ಬ್ರಹ್ಮಗಿರಿ ಕಾಲನಿ, ಟೀಚರ್ಸ್ ಕಾಲನಿ, ಸಾಯಿನಗರ, ಟಿಂಬರ್​ಯಾರ್ಡ್, ಉಣಕಲ್ ಕ್ರಾಸ್, ಬಿವಿಬಿ ಕಾಲೇಜ್, ಗೋಪನಕೊಪ್ಪ, ಮಹಾಲಕ್ಷ್ಮೀ ಬಡಾವಣೆ, ಸಿದ್ದವೀರ ಲೇಜೌಟ್, ಮನೋಜ ಎಸ್ಟೇಟ್, ದೇವಾಂಗ ಪೇಟ, ಬೆಂಗೇರಿ, ಎಸ್​ಬಿಐ ಕಾಲನಿ, ಮಯೂರ ಎಸ್ಟೇಟ್, ಗಾಯತ್ರಿ ಕಾಲನಿ, ಚೇತನಾ ಕಾಲನಿ, ಸನ್ ಸಿಟಿ, ಗಂಗಾವತಿ ಗಾರ್ಡನ್, ರಮೇಶ ಭವನ ರಸ್ತೆ, ಸುಳ್ಳ ರಸ್ತೆ, ಸವೋದಯ ಸರ್ಕಲ್, ದೇಶಪಾಂಡೆ ಲೇಜೌಟ್, ಶಾಖಾಂಬರಿ ಲೇಜೌಟ್, ಸಪ್ತಗಿರಿ ಪಾರ್ಕ್, ಸಂತೋಷ ನಗರ, ಫಾರೆಸ್ಟ್ ಕಾಲನಿ, ಪತ್ರಕರ್ತ ನಗರ, ಚಾಮುಂಡೆಶ್ವರಿ ನಗರ, ವಿಶ್ವೇಶ್ವರ ನಗರ, ಅಶೋಕನಗರ, ರಾಜನಗರ, ವಿದ್ಯಾನಗರ, ಲೋಕಪ್ಪನ ಹಕ್ಕಲ, ಕೆ.ಎಂ.ಸಿ ಮುಂಭಾಗ, ಮಹಿಳಾ ವಿದ್ಯಾಪೀಠ ಪಾಲಿಟೆಕ್ನಿಕ್, ಹೊಸೂರ, ಬ್ಯಾಹಟ್ಟಿ, ಕುಸುಗಲ್, ಸುಳ್ಳ, ಸಾಯಿ ಗಾರ್ಡನ್, ಕುಸುಗಲ್ಲ ಎಪಿಎಂಸಿ ರೋಡ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net