

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಹರದನಹಳ್ಳಿ ಉಪವಿಭಾಗ ವ್ಯಾಪ್ತಿಯ ಅಟ್ಟುಗುಳಿಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎನ್.ಜೆ.ವೈ ಫೀಡರ್‌ನ ನಿರ್ವಹಣೆ ಕಾಮಗಾರಿಯನ್ನು ಜು.23ರಂದು ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹರದನಹಳ್ಳಿ, ಚಂದುಕಟ್ಟೆಮೋಳೆ, ಬಂಡಿಗೆರೆ, ಟಿ.ಕೆ.ಮೋಳೆ, ವೆಂಕಟಯ್ಯನಛತ್ರ, ಬಸವಾಪುರ, ಅಂಕನಶೆಟ್ಟಿಪುರ, ಚಿಕ್ಕಮೋಳೆ, ಕೋಡಿಉಗನೆ, ಬೇವಿನತಾಳಪುರ, ದೊಡ್ಡಮೋಳೆ, ಬ್ಯಾಡಮೂಡ್ಲು, ದೊಳ್ಳಿಪುರ, ಅಟ್ಟುಗುಳಿಪುರ, ಚಿಕ್ಕಹೊಳೆ, ಚಿಕ್ಕಹೊಳೆ ಚೆಕ್‌ಪೋಸ್ಟ್, ಸಿದ್ದಯ್ಯನಪುರ, ಹೊಂಗಲವಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.1912 ಸಂಪರ್ಕಿಸುವಂತೆ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.