ಮೈಸೂರು ನಗರದಲ್ಲಿ ಮೇ 23 ರಂದು ವಿದ್ಯುತ್ ವ್ಯತ್ಯಯ

power
Published on

ಮೈಸೂರು: ರಾಜೀವ್‌ನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ 1ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಮೇ 23 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ರಾಜೀವನಗರ 2ನೇ ಹಂತ, ಕ್ರಿಶ್ಚಿಯನ್ ಕಾಲೋನಿ, ಯಾಸಿನ್ ಮಸ್ಜಿದ್, ಎಸ್.ಬಡಾವಣೆ, ಸೂರ್ಯನಾರಾಯಣ ದೇವಸ್ಥಾನ ರಸ್ತೆ , ಆಲ್ ಬಜಾರ್ ಮಸ್ಜಿದ್ ವೃತ್ತ, ಅಂಬೇಡ್ಕರ್ ಭವನ ರಸ್ತೆ, ಕ್ಯೂಬಾ ಮಸ್ಜಿದ್ ವೃತ್ತ, ನಾರಾಯಣ ಹೃದಯಾಲಯ ಆಸ್ಪತ್ರೆ, ಕಾಮನಕೆರೆಹುಂಡಿ, ಕೆಎಚ್‌ಬಿ ಬಡಾವಣೆ, ಆರ್‌ಟಿಒ ಪೂರ್ವ (55), ಆಸೀನಾ ಬಡಾವಣೆ, ರಾಜೀವನಗರ 3ನೇ ಹಂತ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬೆ.10 ರಿಂದ ಸಂ.5.30ರವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net