

ಹುಕ್ಕೇರಿ: ತಾಲೂಕಿನ ಶಿರಹಟ್ಟಿ ಕೆಡಿಯ ಬೆಲ್ಲದ ತೋಟ ಮತ್ತು ಶಿರಹಟ್ಟಿ ಬಿಕೆಯ ಹೊಸಮನಿ ತೋಟದಲ್ಲಿ ಹೆಚ್ಚುವರಿಯಾಗಿ ಅಳವಡಿಸಿದ ೬೩ ಕೆ.ವಿ. ಸಾಮರ್ಥ್ಯದ ಎರಡು ವಿದ್ಯುತ್ ಪರಿವರ್ತಕಗಳನ್ನು ಶುಕ್ರವಾರ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಉದ್ಘಾಟಿಸಿ ಮಾತನಾಡಿದರು.
ಸದಸ್ಯರು ಮತ್ತು ಗ್ರಾಹಕರಿಗೆ ಹೊರೆಯಾಗದಂತೆ ನಮ್ಮ ಕುಟುಂಬವು ಸಂಘವನ್ನು ಉಳಿಸಿ, ಬೆಳೆಸಿದ್ದು, ೩೦ ವರ್ಷದಿಂದ ಅವಿರೋಧ ಆಯ್ಕೆ ಮಾಡಲಾಗುತ್ತಿದೆ. ಈ ಬಾರಿ ಚುನಾವಣೆ ನಡೆಯಲಿದ್ದು, ನಮ್ಮ ಪೆನಲ್ ಗೆಲುವು ನಿಶ್ಚಿತ. ಮಾಜಿ ಸಂಸದ ರಮೇಶ ಕತ್ತಿ ಮತ್ತು ಶಾಸಕ ನಿಖಿಲ ಕತ್ತಿ ಜನಪರ ಆಡಳಿತ ನಮಗೆ ಶ್ರೀರಕ್ಷೆ ಎಂದರು.
ವಕೀಲ ಡಿ.ಕೆ.ಅವರಗೋಳ, ಆನಂದ ದಪ್ಪಾಧೂಳಿ, ಅಣ್ಣಪ್ಪ ಬ್ಯಾಳಿ, ರಾಮಣ್ಣ ಗೋಟೂರೆ, ಸಂಜು ಹತ್ತರವಾಟ, ಶೀತಲ ಬ್ಯಾಳಿ, ಶ್ರೀಶೈಲ ಶಿರಗಾಂವಿ, ಯಲ್ಲಪ್ಪ ಢಪರಿ, ವಿಠ್ಠಲ ಹೊಸಮನಿ, ಸೈಯ್ಯದ್ ಅಮ್ಮಣಗಿ, ಶಿವಾನಂದ ಢಂಗ, ಮಲಗೌಡ ಪಾಟೀಲ, ಜಯಪಾಲ ಹುಲ್ಯಾಗೋಳ, ಗುಲಾಬ್ ಅಮ್ಮಣಗಿ. ಶಂಕರ ಗುಡಸಿ, ಮಂಜುನಾಥ ಪಡದಾರ ಇತರರಿದ್ದರು.