

ಬೆಳಗಾವಿ: ಇಲ್ಲಿನ ರುಕ್ಮಿಣಿ ನಗರದ ಗ್ಯಾರೇಜ್‌ನಲ್ಲಿ ಶನಿವಾರ ಆಕಸ್ಮಿಕ ವಿದ್ಯುತ್ ಅವಘಡದಿಂದ ಬೆಂಕಿ ಕಾಣಿಸಿಕೊಂಡು, 7 ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಕಣಬರ್ಗಿ 5ನೇ ಕ್ರಾಸ್‌ನ ಜ್ಯೋತಿರ್ಲಿಂಗ ಗಲ್ಲಿಯ ನಿತಿನ್ ಮುಚ್ಚಂಡಿಕರ್ ಎಂಬುವರ ಗ್ಯಾರೇಜ್‌ನಲ್ಲಿ ಈ ಅವಘಡ ಸಂಭವಿಸಿದೆ.
ಈ ಘಟನೆಯಿಂದ ಸುಮಾರು 2.40 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಗ್ಯಾರೇಜ್ ಮಾಲೀಕ ಠಾಣೆಗೆ ದೂರು ನೀಡಿದ್ದಾನೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.