ತ್ಯಾಜ್ಯ ನಿರ್ಲಕ್ಷಿಸಿದರೆ ದಾರಿದ್ರ್ಯ ಪ್ರಾಪ್ತಿ

24 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸಿದರೆ ಬಂಧುತ್ವ ಪ್ರಾಪ್ತಿಯಾಗುವುದು. ಇದರಿಂದ ಪರಿಸರಕ್ಕಾಗುವ ಮಾರಕವನ್ನು ಕಡಿಮೆ ಮಾಡಬಹುದು. ಪರಿಸರ ರಕ್ಷಣೆ, ತ್ಯಾಜ್ಯ ನಿರ್ವಹಣೆಗೆ ಜನರ ಸಹಭಾಗಿತ್ವದೊಂದಿಗೆ, ಸಂಬಂಧಿಸಿದ ಅಧಿಕಾರಿಗಳ ಸಹಕಾರ ಮುಖ್ಯ. ತ್ಯಾಜ್ಯವನ್ನು ನಿರ್ಲಕ್ಷಿಸಿದರೆ ದಾರಿದ್ರ್ಯ ಪ್ರಾಪ್ತಿಯಾಗುತ್ತದೆ ಎಂದು ಪರಿಸರ ತಜ್ಞ ಭಾಲಚಂದ್ರ ಜಾಬಶೆಟ್ಟಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ಜೈವಿಕ ತಂತ್ರಜ್ಞಾನಗಳ ಅಳವಡಿಕೆ ಕುರಿತು ಉಪನ್ಯಾಸ ನೀಡಿದರು.

1975ರ ಆಸುಪಾಸಿನಿಂದ ತ್ಯಾಜ್ಯ ನಿರ್ವಹಣೆ ಸಮಸ್ಯೆ 13 ಲಕ್ಷ ಟನ್​ ಭಾರತದಲ್ಲಿ, 135 ಲಕ್ಷ ಟನ್​ ಕರ್ನಾಟಕದಲ್ಲಿ, 12 ಲಕ್ಷ ಟನ್​ ಹು-ಧಾದಲ್ಲಿ ಕಂಡು ಬರುತ್ತಿದೆ. ಸರ್ಕಾರದ ಯೋಜನೆಗಳು ತ್ಯಾಜ್ಯ ಬಳಕೆಗೆ ಸದುಪಯೋಗವಾದಾಗ ಮಾತ್ರ ಪರಿಸರ ರಕ್ಷಣೆ ಸಾಧ್ಯ. ರಾಸಾಯನಿಕ ಮುಕ್ತ ಕೃಷಿಯನ್ನು ರೈತರು ಅಳವಡಿಸಿಕೊಂಡಾಗ ಆರೋಗ್ಯಯುತ ಆಹಾರವನ್ನು ನೀಡಲು ಸಾಧ್ಯ. ಇಲ್ಲವಾದರೆ ಮಾರಕ ರೋಗಗಳಿಂದ ಜನರ ಜೀವನದಲ್ಲಿ ಅಸ್ತವ್ಯಸ್ತವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಂಕರ ಕುಂಬಿ ಮಾತನಾಡಿ, ಪರಿಸರ ರಕ್ಷಣೆ ಬಾಯಿ ಮಾತಿನಿಂದಾಗುವುದಲ್ಲ. ಅದು ನಮ್ಮೊಳಗೆ ಜಾಗೃತಿ ಮೂಡಿದಾಗ ಮತ್ತು ಸಂಘಟನಾತ್ಮಕವಾಗಿ ಪರಿಸರ ಕುರಿತ ಅಭಿಯಾನಗಳಲ್ಲಿ ಭಾಗವಹಿಸಿ, ಪ್ರತಿಯೊಬ್ಬರ ಮನೆ ಮನೆಗೂ ತಲುಪಿಸಿದಾಗ ಮಾತ್ರ ಸ್ವಚ್ಛ ಪರಿಸರ, ನೆಮ್ಮದಿಯ ಜೀವನ ಸಾಧ್ಯ. ಇಲ್ಲವಾದರೆ ಮುಂದಿನ ತಲೆಮಾರಿಗೆ ರೋಗಗಳನ್ನು ಹಸ್ತಾಂತರಿಸಿದಂತೆ ಆಗುತ್ತದೆ ಎಂದರು.

ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಡಾ. ಶಿವಾನಂದ ಶೆಟ್ಟರ, ಡಾ. ಆನಂದ ಶಿವಪುರ, ಆರ್​.ಜಿ. ತಿಮ್ಮಾಪುರ, ಸರಸ್ವತಿ ಪೂಜಾರ, ಶಾರದಾ ದಾಬಡೆ, ನಿರ್ಮಲಾ ಹಿರೇಗೌಡರ, ಪ್ರಮೀಳಾ ಜಕ್ಕಣ್ಣವರ, ಕೆ.ಎಸ್​. ಕೋರಿಶೆಟ್ಟರ, ಉಲ್ಲಾಸ ಹರಪನಹಳ್ಳಿ, ಕವಿತಾ ಎಲೆದಳ್ಳಿ, ಜಿ.ಜಿ. ಗೊಂದಿ, ಇತರರು ಇದ್ದರು.

ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ನವೀನಶಾಸ್ತ್ರಿ ಪುರಾಣಿಕ ನಿರೂಪಿಸಿದರು. ಡಾ. ಅರುಣಕುಮಾರ ಶಿರಹಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net