ಬಡತನ ನಿವಾರಣೆಗೆ ಶಿಕ್ಷಣ ಅಗತ್ಯ

6Murgoda1-A
ಮುರಗೋಡದ ಮಹಾಂತ ಶಿಕ್ಷಣ ಸಂಸ್ಥೆಯಲ್ಲಿ ಶ್ರೀ ನೀಲಕಂಠ ಸ್ವಾಮೀಜಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ/ಪ್ರಾಥಮಿಕ ಹಾಗೂ ಗಣಕಯಂತ್ರ ಉದ್ಘಾಟನೆ ಸಮಾರಂಭದಲ್ಲಿ ಎಂಎಲ್‌ಸಿ ಪ್ರಕಾಶ ಹುಕ್ಕೇರಿ ಮಾತನಾಡಿದರು.ನೀಲಕಂಠ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಅಶೋಕ ಶೆಟ್ಟರ ಇತರರಿದ್ದರು.
Published on

ಮುರಗೋಡ: ಬಡತನ ಹೋಗಲಾಡಿಸುವ ಶಕ್ತಿ ಶಿಕ್ಷಣಕ್ಕಿದದ್ದು, ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಸಾಧನೆ ಮಾಡಲು ಸಾಧ್ಯ ಎಂದು ಎಂಎಲ್‌ಸಿ ಪ್ರಕಾಶ ಹುಕ್ಕೇರಿ ಹೇಳಿದರು.

ಸ್ಥಳೀಯ ಶ್ರೀ ಮಹಾಂತೇಶ್ವ ಶಿಕಣ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ಪ್ರಾಥಮಿಕ ಶಾಲೆಯ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣೆ ಮತ್ತು ನೀಲಕಂಠ ಸ್ವಾಮೀಜಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ/ಪ್ರಾಥಮಿಕ ಶಾಲೆ ಹಾಗೂ ಗಣಕಯಂತ್ರ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಮಠ ಮಾನ್ಯಗಳು ಶಿಕ್ಷಣಕ್ಕೆ ಮಹತ್ವ ನೀಡುತ್ತಿರುವುದು ಶ್ಲಾಘನೀಯ ಎಂದರು.

ಮಹಾಂತ ದುರದುಂಡೇಶ್ವರ ಮಠದ ಪೀಠಾಧಿಕಾರಿ ನೀಲಕಂಠ ಸ್ವಾಮೀಜಿ ಮಾತನಾಡಿ, ಜ್ಞಾನದಿಂದ ಸಮಾಜದಲ್ಲಿ ಜನಮನ್ನಣೆ ಗಳಿಸಬಹುದು. ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಬೇಕಾದರೆ ಸಮಯ ಪ್ರಜ್ಞೆ ಅಗತ್ಯ ಎಂದರು. ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸಂಕೇತಾ ಹಟ್ಟಿಹೊಳಿ, ಉಪಾಧ್ಯಕ್ಷೆ ಮಹಾದೇವಿ ಮಬನೂರ, ಅಶೋಕ ಶೆಟ್ಟರ, ಎಸ್.ಟಿ.ಪಟ್ಟಣಶೆಟ್ಟಿ, ಶಿವನಗೌಡ ಪಾಟೀಲ, ವಿಜಯ ಸಾಣಿಕೊಪ್ಪ, ಮಹಾಂತೇಶ ಅವರಾದಿ, ಸುರೇಶಬಾಬು ಕಡ್ಲಾಸ್ಕರ, ಸುನೀಲ ತಿವಾರಿ, ವಿ.ಬಿ.ದೇಸಾಯಿ, ಸಚಿನ ದೇಸಾಯಿ, ಚಿದಂಬರ ತೊರಗಲ್ಲ, ಪ್ರಾಚಾರ್ಯ ರಮೇಶ ಭಜಂತ್ರಿ, ದೀಪಾ ಪಡೇಣ್ಣವರ, ಆರ್.ಎಂ.ಅಂಗಡಿ, ಎಂ.ಯು.ಉಪ್ಪಿನ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net