

ಸಿರಿಗೇರಿ: ಸಮೀಪದ ಗುಂಡಿಗನೂರು ಗ್ರಾಮದ ಕೆರೆಗೆ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಗುಂಡಿಗನೂರು, ಕ್ಯಾದಿಗೆಹಾಳು, ಹಾವಿನಾಳು ಗೇಣಿಕೆಹಾಳು ಮತ್ತು ಸುತ್ತ್ತಲಿನ ಗ್ರಾಮಗಳ ಜನರು ಸಂಸದ ಈ ತುಕಾರಾಮ್‌ಗೆ ಸೋಮವಾರ ಮನವಿ ಸಲ್ಲಿಸಿದರು.
ಕೆರೆಯಲ್ಲಿ ನೀರಿಲ್ಲದೆ ದನ-ಕರು ಹಾಗೂ ಜನರ ಬಳಕೆಗೆ ತೊಂದರೆಯಾಗುತ್ತಿದೆ. ಕೆರೆಗೆ ನೀರು ತುಂಬಿಸಲು ತುಂಗಭದ್ರಾ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಬೇಕು. ಶುಕ್ರವಾರದಿಂದ ಸೋಮವಾರದವರೆಗೂ ಕೇವಲ 5 ದಿನ ನೀರು ಬಿಟ್ಟಿದ್ದು ಕೆರೆ ತುಂಬದ ಕಾರಣ ಮುಂದೆ ನೀರಿನ ಸಮಸ್ಯೆಯಾಗಲಿದೆ ಎಂದರು.
ಸಂಸದ ಈ ತುಕಾರಾಮ್‌ತುಂಗಭದ್ರಾ ಜಲಾಶಯ ಅಧಿಕಾರಿಗೆ ಕರೆ ಮಾಡಿ ಹೆಚ್ಚುವರಿಯಾಗಿ ಐದು ದಿನ ಗುಂಡಿಗನೂರು ಕೆರೆಗೆ ನೀರು ಬಿಡುವಂತೆ ಸೂಚಿಸಿದರು.