ಮಂಗಳೂರಿನಲ್ಲಿ ಟೈಸನ್ ಕೋಳಿ ಅಭಾವ, ದರ ಹೆಚ್ಚಳ

koli
ಟೈಸನ್ ಕೋಳಿ ಪೂರೈಕೆಯಲ್ಲಿ ಅಭಾವ ಉಂಟಾಗಿದೆ.
Published on

ಮಂಗಳೂರು: ಕೆಲವು ದಿನಗಳ ಹಿಂದೆ ಇಳಿಕೆಯಾಗಿದ್ದ ಕೋಳಿ ಮಾಂಸ ದರ ಮತ್ತೆ ಗಗನಕ್ಕೇರಿದೆ. ಟೈಸನ್ ಕೋಳಿ ಪೂರೈಕೆಯಲ್ಲಿ ಅಭಾವ ಉಂಟಾಗಿದೆ. ಬ್ರಾಯ್ಲರ್ ದರ 60 ರೂ. ಹೆಚ್ಚಳವಾದರೆ ಟೈಸನ್ ದರ 100 ರೂ.ನಷ್ಟು ಹೆಚ್ಚಳವಾಗಿದೆ.

ಮಂಗಳೂರಿನಲ್ಲಿ 180 ರೂ. ಇದ್ದ ಟೈಸನ್ ದರ 260ರಿಂದ 270 ರೂ.ಗೆ ಏರಿಕೆಯಾಗಿದೆ. ಬ್ರಾಯ್ಲರ್ ಕೋಳಿ ದರವೂ 140ರಿಂದ 180ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಟೈಸನ್ ಕೋಳಿಯ ಮರಿಗಳನ್ನು ಸಾಕಣೆ ಮಾಡಿ ಮಾಂಸದ ಬದಲು ಮೊಟ್ಟೆ ಇಟ್ಟು, ಮರಿ ಮಾಡುವ ಉದ್ದೇಶಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಇದರಿಂದ ಮಾರುಕಟ್ಟೆಗೆ ಬರುವ ಟೈಸನ್ ಕೋಳಿ ಕಡಿಮೆಯಾಗುತ್ತಿದೆ. ಬುಧವಾರ ಮಂಗಳೂರಿನಲ್ಲಿ ಬ್ರಾಯ್ಲರ್ ವಿದ್ ಸ್ಕಿನ್‌ಗೆ 240 ಹಾಗೂ ವಿದೌಟ್ ಸ್ಕಿಟ್‌ಗೆ 260 ರೂ. ದರದಲ್ಲಿ ಮಾರಾಟವಾಗಿದೆ. ಮೊಟ್ಟೆ ದರ 6 ರೂ. ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net