ಹೊಂಡ ಗುಂಡಿಗಳ ಆಗರ ಮೂಲ್ಕಿ ಬಸ್ಸು ನಿಲ್ದಾಣ

Mul_Potholes
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಮುಖ್ಯ ಪ್ರದೇಶವಾದ ಮೂಲ್ಕಿ ಬಸ್ಸು ನಿಲ್ದಾಣ ವಿವಿಧ ಕಡೆಗಳಿಂದ ಆಗಮಿಸುವ ಸಹಸ್ರಾರು ಜನರು ಬಂದಿಳಿಯುವ ಪ್ರದೇಶವಾಗಿದೆ. ಆದರೆ ಬಸ್ಸು ನಿಲ್ದಾಣ ಮಾತ್ರ ಹೊಂಡ ಗುಂಡಿಗಳಿಂದ ತುಂಬಿ ಜನಸಾಮಾನ್ಯರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಮಂಗಳೂರಿನಿಂದ ಉಡುಪಿ, ಕುಂದಾಪುರ, ಮಣಿಪಾಲ, ಕಾರ್ಕಳ ಪ್ರದೇಶಕ್ಕೆ ಹೋಗುವ ಎಕ್ಸ್‌ಪ್ರೆಸ್ ಬಸ್ಸುಗಳು, ಕಿನ್ನಿಗೋಳಿ, ಕಟೀಲು, ಮೂಡುಬಿದಿರೆ, ಮುಂಡ್ಕೂರು, ಕಾರ್ಕಳ, ಉಡುಪಿ ಕಡೆ ಹೋಗುವ ಶಟಲ್ ಬಸ್ಸುಗಳು ಬಂದು ನಿಲ್ಲುವ ಪ್ರದೇಶವಾಗಿದ್ದು, ಹೊಂಡಗಳಿಂದ ಜನಸಾಮಾನ್ಯರಿಗೆ ಸಮಸ್ಯೆ ಎದುರಾಗಿದೆ.

ಕೆಸರು ರಾಚುವ ಭೀತಿ:

ಬಸ್ಸುಗಳು ವೇಗವಾಗಿ ಬಂದು ನಿಲ್ಲುವ ಪರಿಣಾಮ ಬಸ್ಸಿಗಾಗಿ ಕಾಯುವವರ ಮೇಲೆ ಕೆಸರು ನೀರು ರಾಚುವ ಸಮಸ್ಯೆ ಎದುರಾಗಿದೆ. ಬಸ್ಸು ಹಿಡಿಯಲ್ಲಿ ಓಡಿ ಬರುವ ಪ್ರಯಾಣಿಕರು ಗುಂಡಿಗೆ ಕಾಲುಹಾಕಿ ಬೀಳುವ ಅಪಾಯದ ಜತೆಗೆ ಶಾಲಾ ವಿದ್ಯಾರ್ಥಿಗಳಿಗೆ ಈ ಗುಂಡಿಗಳು ಮಾರಣಾಂತಿಕವಾಗಿವೆ. ಜನಪ್ರತಿನಿಧಿಗಳು, ಮೂಲ್ಕಿ ನಗರ ಪಂಚಾಯಿತಿ ಗುಂಡಿಗಳ ಬಗ್ಗೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಸ್ಸು ಹಿಡಿಯಲು ಓಡುವಾಗ ಗುಂಡಿಗೆ ಕಾಲು ಬಿದ್ದು ಕಾಲು ಉಳುಕಿ ಸಮಸ್ಯೆಯಾಗಿದೆ. ಇಲ್ಲಿ ನಿಲ್ದಾಣ ಪೂರ್ತಿ ಗುಂಡಿಗಳು ಉದ್ಭವವಾಗಿವೆ. ನರಸಿಂಹ, ಪ್ರಯಾಣಿಕರು, ಉಡುಪಿ

ನರಸಿಂಹ, ಪ್ರಯಾಣಿಕರು, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net