ಪೋತೀಸ್ ವಾರ್ಷಿಕೋತ್ಸವ: ವಿಶೇಷ ರಿಯಾಯಿತಿ

ಪೊತಹಿಸ
Published on

ಬೆಂಗಳೂರು: ದಕ್ಷಿಣ ಭಾರತದ ಹೆಸರಾಂತ ವಸ್ತ್ರ ಮಾರಾಟ ಸಂಸ್ಥೆ ಪೋತೀಸ್ ತನ್ನ 2ನೇ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿತು.

ಕೆಂಪೇಗೌಡ ರಸ್ತೆಯಲ್ಲಿರುವ ಮಳಿಗೆಯಲ್ಲಿ ಬುಧ ವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರ ನಟರ ಡೈಲಾಗ್​ಗಳನ್ನು ಸಿಬ್ಬಂದಿ ಹೇಳುವ ಮೂಲಕ ನೆರೆದಿದ್ದವರ ಮನರಂಜಿಸಿದರು. ಸಿನಿ ಹಾಡಗಳಿಗೆ ಹೆಜ್ಜೆಹಾಕಿ ಚಪ್ಪಾಳೆ ಗಿಟ್ಟಿಸಿಕೊಂಡರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಸಿಬ್ಬಂದಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ರಮೇಶ್ ಪ್ರಮಾಣಪತ್ರ ವಿತರಿಸಿದರು.

ಪೋತೀಸ್ ಸಂಸ್ಥೆಯು ಗುಣಮಟ್ಟದ ದಿರಿಸುಗಳನ್ನು ನೀಡುತ್ತಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎಲ್ಲ ವಯೋಮಾನದವರಿಗೆ ಒಪ್ಪುವಂಥ ವಿನೂತನ ವಿನ್ಯಾಸದ ಉಡುಪುಗಳು ಮಳಿಗೆಯಲ್ಲಿ ಲಭ್ಯವಿವೆ ಎಂದು ರಮೇಶ್ ತಿಳಿಸಿದರು.

ವೈವಿಧ್ಯಮಯ ವಸ್ತ್ರಗಳು: ಗಾಂಧಿನಗರದ ಕೆ.ಜಿ. ರಸ್ತೆಯಲ್ಲಿರುವ ಪೋತೀಸ್ ಮಳಿಗೆಯಲ್ಲಿ ಮಹಿಳೆಯರು, ಮಕ್ಕಳು ಮತ್ತು ಪುರುಷರಿಗೆ ಬೇಕಾದ ವಸ್ತ್ರಗಳು ಸಿಗಲಿವೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮಳಿಗೆಯ ಪ್ರತಿ ಅಂತಸ್ತಿನಲ್ಲೂ ಒಂದೊಂದು ಬಗೆಯ ವಸ್ತ್ರಗಳು ಸಿಗುವಂತೆ ಮಾಡಲಾಗಿದೆ.

ಪೋತೀಸ್ ರೇಷ್ಮೆ ವಸ್ತ್ರಗಳಿಗಾಗಿಯೇ ಪ್ರಸಿದ್ಧಿ ಪಡೆದಿದೆ. ರೇಷ್ಮೆಯಲ್ಲಿ ತಯಾರಿಸಿದ ಶರ್ಟ್, ಧೋತಿಗಳು ಲಭ್ಯವಿರಲಿವೆ. ಕಾಟನ್, ಸಿಂಥೆಟಿಕ್ ಸೀರೆಗಳು, ಡಿಸೈನರ್, ಫ್ಯಾನ್ಸಿ ಸೀರೆಗಳು, ಬ್ರೖೆಡಲ್ ಲೆಹೆಂಗಾ, ಪುರುಷರ ಅಂತಾರಾಷ್ಟ್ರೀಯ ಬ್ರಾ್ಯಂಡ್​ನ ಉಡುಪು, ಸಾಂಪ್ರದಾಯಿಕ ಉಡುಗೆಗಳು ಸೇರಿ ವಿವಿಧ ವಿನ್ಯಾಸದ ಮನೋಹರ ವಸ್ತ್ರಗಳು ಆಕರ್ಷಿಸುತ್ತವೆ. ವಿವಾಹ ಸಮಾರಂಭಗಳಿಗೆ ಧರಿಸುವ ಬಟ್ಟೆಗಳು ಪೋತೀಸ್​ನ ಆಕರ್ಷಣೆಯಾಗಿದೆ.

ವಿಶೇಷ ರಿಯಾಯಿತಿ: ಗಾಂಧಿನಗರದಲ್ಲಿ 2018ರಲ್ಲಿ ಆರಂಭವಾದ ಪೋತೀಸ್ ಮಳಿಗೆಯು ಎಲ್ಲ ಋತುಮಾನದಲ್ಲಿ ಗ್ರಾಹಕರಿಗೆ ವಿಶೇಷ ಉಡುಗೊರೆ ನೀಡುತ್ತಾ ಬಂದಿದೆ. ಆಷಾಢ ತಿಂಗಳಿನಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ವಸ್ತ್ರಗಳನ್ನು ನೀಡಲಾಗುತ್ತಿದೆ. ಪೋತೀಸ್​ಗೆ ಭೇಟಿ ನೀಡಿದರೆ ವಿವಿಧ ಬಗೆಯ ಮನೋಹರ ವಸ್ತ್ರಗಳ ಸಂಗ್ರಹ ನೋಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net