

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವವಿದ್ಯಾಲಯದ 2024- 25ನೇ ಸಾಲಿನ ಬಿ.ಎ ಪ್ರಥಮ ಸೆಮಿಸ್ಟರ್‌ನ ಕನ್ನಡ ಪಠ್ಯಪುಸ್ತಕ `ಬೆಳಗು' 1ರ 4ನೇ ಅಧ್ಯಾಯದ `ರಾಷ್ಟ್ರೀಯತೆಯ ಆಚರಣೆಯ ಸುತ್ತ' ಲೇಖನ ಕೈ ಬಿಟ್ಟ ಬೆನ್ನಲ್ಲೇ ನಿಗದಿತ ಪರೀಕ್ಷೆಯನ್ನೂ ಮುಂದೂಡಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಎಲ್ಲ ಸ್ನಾತಕ ಬಿಎ, ಬಿಪಿಎ ಮ್ಯುಸಿಕ್, ಬಿಎಸ್‌ಡಬ್ಲು, ಬಿವಿಎ, ಬಿಎಸ್.ಸಿ (ಎಚ್‌ಎಂ), ಬಿಟಿಟಿಎಂ ಕೋರ್ಸ್ಗಳಿಗೆ ಜ. 29ರಂದು ಜರುಗಬೇಕಿದ್ದ ಕನ್ನಡ ವಿಷಯದ ಪರೀಕ್ಷೆಯನ್ನು ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.