ಚೈತನ್ಯ ಮಹಿಳಾ ಬ್ಯಾಂಕ್ ಚುನಾವಣೆ ಮುಂದೂಡಿ; ಸದಸ್ಯೆ ಬಿಸ್ಮಿಲ್ಲಾ ರಾಜೇಸಾಬ ಶಿವನಗುತ್ತಿ ಒತ್ತಾಯ

BISMILLA SHIVANAGUTTI
ಬಿಸ್ಮಿಲ್ಲಾ ರಾಜೇಸಾಬ ಶಿವನಗುತ್ತಿ
Published on

ವಿಜಯಪುರ: ಚೈತನ್ಯ ಮಹಿಳಾ ಬ್ಯಾಂಕ್‌ನ ಚುನಾವಣೆ ದಿನಾಂಕ ಮುಂದೂಡಿಸುವ ಹಾಗೂ ಬ್ಯಾಂಕ್‌ನ ಎಲ್ಲ ವಿವರಗಳನ್ನು ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ಬ್ಯಾಂಕ್‌ನ ಸದಸ್ಯೆ ಮತ್ತು ಷೇರುದಾರರೂ ಆಗಿರುವ ಬಿಸ್ಮಿಲ್ಲಾ ರಾಜೇಸಾಬ ಶಿವನಗುತ್ತಿ ಜಿಲ್ಲಾಡಳಿತ ಮತ್ತು ಸಹಕಾರಿ ಸಂಘ-ಸಂಸ್ಥೆಗಳ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್‌ನ ಸದಸ್ಯತ್ವ ಸಂಖ್ಯೆ (ಸಂ.004000201011180) ಹಾಗೂ ಷೇರು (ಸಂ.1457) ಸದಸ್ಯತ್ವ ಹೊಂದಿದ್ದು, ವ್ಯವಸ್ಥಾಪಕ ನಿರ್ದೇಶಕರು ನಮ್ಮ ಲಕೋಟೆಯನ್ನು ತೆಗೆದುಕೊಂಡು ಹೋಗಿ ಬೇನಾಮಿ (ನಂ.004013301001227) ನಂಬರ್‌ಗೆ ಹಾಕಿ ಐಡಿ ಕಾರ್ಡ್ ಕೊಟ್ಟಿದ್ದಾರೆ. ಇದೇ ರೀತಿ ಬ್ಯಾಂಕ್‌ನ ಸಿಬ್ಬಂದಿ ಹಾಗೂ ಸಾರ್ವಜನಿಕರ ಹಣ ದುರುಪಯೋಗಪಡಿಸಿಕೊಂಡಿರುವುದು ಸಾಬೀತಾಗುತ್ತದೆ. ಹೀಗಾಗಿ ತಾವು ತಕ್ಷಣ ಬ್ಯಾಂಕ್‌ನ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಬೇಕು ಎಂದು ಅವರು ವಿನಂತಿಸಿದ್ದಾರೆ.

ಸದಸ್ಯೆ ಹಾಗೂ ಷೇರುದಾರರಾಗಿದ್ದರೂ ಬ್ಯಾಂಕ್‌ನಿಂದ ಈವರೆಗೆ ಸಭೆ ಸೂಚನಾ ಪತ್ರಗಳು, ಸಾಮಾನ್ಯ ಸಭೆಯ ಪತ್ರಗಳು ಯಾವುದೇ ತರಹದ ಸೂಚನೆಗಳು ಬಂದಿಲ್ಲ. ಪ್ರಸಕ್ತ ತಿಂಗಳಲ್ಲಿ ಚುನಾವಣೆಯ ಸೂಚನೆಗಳು ಪತ್ರವು ಬಂದಿದ್ದು, ಜಲನಗರದ ಶಾಖೆಗೆ ಹೋಗಿ ಐಡಿ ಕಾರ್ಡ್ ಪಡೆಯಲು ಚಲನ ತುಂಬಿ ಸಂಬಂಧಪಟ್ಟ ಹಣ ಸಂದಾಯ ಮಾಡಿಡಿದರೂ ಐಡಿ ಕಾರ್ಡ್ ನೀಡಿಲ್ಲ. ಕೇಳಿದರೆ ಐಡಿ ಕಾರ್ಡ್ ಕಳೆದಿದ್ದು, ನಾಲ್ಕು ತಿಂಗಳ ನಂತರ ಬರಲಿದೆ ಎಂದು ಹೇಳುತ್ತಿದ್ದಾರೆ. ಇದೊಂದು ಉದ್ದೇಶಪೂರ್ವಕ ಕೃತ್ಯವಾಗಿದ್ದು, ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವ ಹುನ್ನಾರವಾಗಿದೆ. ಚುನಾವಣೆಗೆ ಸ್ಪರ್ಧಿಸಲು ನಮೂನೆ ಸಹ ನೀಡದಿರುವುದು ಗಮನಿಸಿದರೆ ಇದರ ಹಿಂದೆ ಕುತಂತ್ರ ಅಡಗಿರುವುದು ಗೊತ್ತಾಗಲಿದೆ. ಅಲ್ಲದೇ ವ್ಯವಸ್ಥಾಪಕ ನಿರ್ದೇಶಕರು ನಿಮಗೆ ಚುನಾವಣೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ ಎನ್ನುತ್ತಿದ್ದಾರೆ. ಯಾವ ಕಾರಣಕ್ಕಾಗಿ ಸ್ಪರ್ಧೆ ಮಾಡಲು ಅವಕಾಶ ಇಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಮನವಿ ಮಾಡಿದರೂ ಮಾಹಿತಿ ನೀಡಿಲ್ಲ. ಹೀಗಾಗಿ ಚುನಾವಣೆ ದಿನಾಂಕವನ್ನು ಮುಂದೂಡಬೇಕು. ಎಲ್ಲ ಷೇರುದಾರರಿಗೆ, ಎಲ್ಲ ಸದಸ್ಯರಿಗೆ ಸಂಬಂಧಿಸಿದ ಎಲ್ಲರಿಗೂ ಚುನಾವಣೆಯ ಬಗ್ಗೆ ವಿವರ ನೀಡಲು ಕ್ರಮ ಕೈಗೊಳ್ಳಬೇಕೆಂದು ಬಿಸ್ಮಿಲ್ಲಾ ಆರ್. ಶಿವನಗುತ್ತಿ ಮನವಿಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net