

ಗಂಗಾವತಿ: ಮೈಸೂರು ಮುಕ್ತ ವಿವಿ ಪದವಿ ಪರೀಕ್ಷೆ ದಿನಾಂಕ ಬದಲಿಸುವಂತೆ ಒತ್ತಾಯಿಸಿ ಎಸ್‌ಎ್ಐ ಜಿಲ್ಲಾ ಸಮಿತಿ ಸದಸ್ಯರು ನಗರದ ಮುಕ್ತ ವಿವಿ ಸ್ಥಳೀಯ ಅಧ್ಯಯನ ಕೇಂದ್ರದ ಮುಂದೆ ಮಂಗಳವಾರ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿ ಶಾಖೆ ಪ್ರತಿನಿಧಿ ಹೊನ್ನೇಶ ಒಡೆಯರ್‌ಗೆ ಮನವಿ ಸಲ್ಲಿಸಿದರು.
ಸಮಿತಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಮಾತನಾಡಿ, ಯುಪಿಎಸ್‌ಸಿ ಮತ್ತು ಮೈಸೂರು ಮುಕ್ತ ವಿವಿ ಸ್ನಾತಕೋತ್ತರ ಪದವಿ ಪರೀಕ್ಷೆ ಮೇ 25ರಂದು ಆಯೋಜಿಸಿದ್ದು, ಇದರಿಂದ ಎರಡೂ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಒಂದೇ ದಿನ ಎರಡು ಪರೀಕ್ಷೆ ಆಯೋಜಿಸಿದರೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗುವ ಸಾಧ್ಯತೆಗಳಿವೆ. ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದ್ದು, ಉನ್ನತ ಶಿಕ್ಷಣ ಮತ್ತು ಉದ್ಯೋಗದ ಕನಸಿನಿಂದ ದೂರವಾಗಬೇಕಾದ ಪರಿಸ್ಥಿತಿ ಬಂದಿದೆ. ಮುಕ್ತ ವಿವಿ ಆಡಳಿತ ಮಂಡಳಿ ಈ ಬಗ್ಗೆ ಚರ್ಚೆ ನಡೆಸಿ, ಸ್ನಾತಕೋತ್ತರ ಪದವಿ ಪರೀಕ್ಷೆ ದಿನಾಂಕ ಬದಲಿಸುಂತೆ ಒತ್ತಾಯಿಸಿದರು.