ಪೋಸ್ಟರ್ ಪ್ರದರ್ಶನ, ಗದರಿದ ಸಿಎಂ

10 HVR 2
Published on

ಹಾವೇರಿ: ತಾಲೂಕಿನ ಜಂಗಮನಕೊಪ್ಪದಲ್ಲಿ ಹಾವೆಮುಲ್‌ನಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಹಾವೇರಿ ಮೀಸಲು ಕ್ಷೇತ್ರದ ಟಿಕೆಟ್‌ಅನ್ನು ತಮ್ಮ ನಾಯಕರಿಗೆ ನೀಡುವಂತೆ ವೆಂಕಟೇಶ ನಾರಾಯಣಿ ಹಾಗೂ ಪರಮೇಶ್ವರಪ್ಪ ಮೇಗಳಮನಿ ಬೆಂಬಲಿಗರು ತಾಮೇಲು ತಾಮೇಲು ಎಂಬಂತೆ ಪೋಸ್ಟರ್ ಪ್ರದರ್ಶಿಸಿದರು.
ಸಿಎಂ ಭಾಷಣ ಆರಂಭಿಸುವ ವೇಳೆ ಎರಡೂ ಕಡೆಯ ಬೆಂಬಲಿಗರು ಜೋರಾಗಿ ಘೋಷಣೆ ಕೂಗುವ ಮೂಲಕ ಗಮನ ಸೆಳೆಯಲು ಯತ್ನಿಸಿದರು. ಈ ವೇಳೆ ಗರಂ ಆದ ಸಿಎಂ, ‘ಇಲ್ಲಿ ಕಾರ್ಯಕ್ರಮ ಇರೋದು ಏನು. ನೀವು ಮಾಡುತ್ತಿರುವುದು ಏನು ? ಪೋಸ್ಟರ್ ಕೆಳಗೆ ಇಡ್ರಿ, ಸುಮ್ಮನಿರಿ’ ಎಂದು ಗದರಿದ ಪ್ರಸಂಗ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net