ಪಾಂಡೇಶ್ವರ ಶಾರದೋತ್ಸವದ ಪೋಸ್ಟರ್ ಬಿಡುಗಡೆ

kota (2)
Published on

ಕೋಟ: ಸಾಸ್ತಾನದ ಪಾಂಡೇಶ್ವರ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆಯೋಜಿಸಲಿರುವ 32ನೇ ವರ್ಷದ ಶಾರದ ಉತ್ಸವ ಸೆ.29ರಿಂದ ಅ.2ರವರೆಗೆ ನಡೆಯಲಿದ್ದು, ಇದರ ಪೋಸ್ಟರ್ ಬಿಡುಗಡೆ ಸಮಾರಂಭ ಮಂಗಳವಾರ ಜರುಗಿತು. ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ.ಕುಂದರ್ ಪೋಸ್ಟರ್ ಬಿಡುಗಡೆಗೊಳಿಸಿ ಶುಭಹಾರೈಸಿದರು. ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ, ಕಾರ್ಯದರ್ಶಿ ದಿನಕರ ಪಾಂಡೇಶ್ವರ, ಪ್ರಮುಖರಾದ ವಿಶ್ವನಾಥ್ ಆಚಾರ್ಯ, ಲೀಲಾವತಿ ಗಂಗಾಧರ ಪೂಜಾರಿ, ಆರ್ ಪಿ. ಆನಂದ, ಸುರೇಶ್ ಪೂಜಾರಿ, ಪ್ರಮೋದ ಪೂಜಾರಿ, ಅಮಿತಾ, ಚಂದ್ರಶೇಖರ ಆಚಾರ್ಯ, ಚಂದ್ರ ಪೂಜಾರಿ ಕೋಟ ಇದ್ದರು. ಶ್ರೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net