ಗುರುವಂದನಾ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆ

22
Published on

ಮೈಸೂರು: ಶ್ರೀರೇಣುಕಾರಾಧ್ಯ ಕಲಾವಿದರ ಬಳಗದಿಂದ ಗುರು ಪೂರ್ಣಿಮೆ ಅಂಗವಾಗಿ ಜು.21ರಂದು ಆಯೋಜಿಸಲಿರುವ ಹರಿಕೃಥಾ ಕಲಾವಿದರಿಗೆ ಗುರುವಂದನಾ ಕಾರ್ಯಕ್ರಮದ ಭಿತ್ತಿಪತ್ರವನ್ನು ಶಾಸಕ ಜಿ.ಟಿ.ದೇವೇಗೌಡ ಇತ್ತೀಚೆಗೆ ಬಿಡುಗಡೆ ಮಾಡಿದರು.
ಕಲಾವಿದರಾದ ಕೆರೆಹಳ್ಳಿ ಲೋಹಿತ್, ಪಡವಾರಹಳ್ಳಿ ಮಂಜಣ್ಣ, ಕೆಬ್ಬೆಹುಂಡಿ ಶಿವಕುಮಾರ್, ಬಾಗಳಿ ಮಹೇಶ್ ಇತರರು ಇದ್ದರು. ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಕಾಲೇಜು ಸಭಾಂಗಣದಲ್ಲಿ ರಂಗಭೂಮಿ ನಿರ್ದೇಶಕರಿಗೆ, ಹಿರಿಯ ರಂಗಭೂಮಿ ಕಲಾವಿದರು, ಹಿನ್ನೆಲೆ ವಾದ್ಯ ಸಂಯೋಜಕರು, ಹರಿಕಥ ಕಲಾವಿದರಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಚಿತ್ರಕಲಾ ಸ್ಪರ್ಧಾ ಇದ್ದು, 8ವರ್ಷದಿಂದ 12 ವರ್ಷ, 13 ವರ್ಷದಿಂದ 18 ವರ್ಷ, 18 ವರ್ಷ ಮೆಲ್ಪಟ್ಟವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಚಿತ್ರಕಲಾ ಸ್ಪರ್ಧೆಯು ಅಂದು ಬೆಳಗ್ಗೆ 9 ಗಂಟೆಗೆ ನಡೆಯಲಿದ್ದು, ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುವುದು. ಮಾಹಿತಿಗೆ ಮೊ.8105078070 ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net