

ಭರಮಸಾಗರ: ಎಲ್ಲ ಅಂಚೆ ಸೇವೆಗಳು ಒಂದೇ ಸೂರಿನಡಿ ಗ್ರಾಹಕರಿಗೆ ತಲುಪಿಸುವ ಜನಸ್ನೇಹಿ ಕಾರ್ಯಕ್ರಮ ಅಂಚೆ ಜನ ಸಂಪರ್ಕ ಅಭಿಯಾನ ವಿನೂತನ ಕಾರ್ಯಕ್ರಮವಾಗಿದೆ ಎಂದು ಉಪ ಅಂಚೆ ಅಧೀಕ್ಷಕ ಅನಿಲ್ ಕುಮಾರ್ ಹೇಳಿದರು.
ಇಲ್ಲಿನ ಅಂಚೆ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಚೆ ಜನ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೆ ಜನರು ಅಂಚೆ ಕಚೇರಿ ಹುಡುಕಿಕೊಂಡು ಹೋಗಬೇಕಿತ್ತು, ಆದರೆ, ಇಂದು ಕೇಂದ್ರ ಸರ್ಕಾರ ಉತ್ತಮ ಯೋಜನೆ ಹಮ್ಮಿಕೊಂಡಿದ್ದು, ಅಂಚೆ ಸೇವೆಯನ್ನು ಮನೆ ಬಾಗಿಲಿಗೆ ಸಲ್ಲಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಸಾಹಿತಿ ಸಾದಿಕ್ ಉಲ್ಲಾ ಮಾತನಾಡಿ, ಬ್ಯಾಂಕ್ ಗಳಿಗಿಂತ ಅಂಚೆ ಕಚೇರಿ ಸೇವೆಗಳು ಉತ್ತಮವಾಗಿವೆ ಎಂದರು.
ಉಪ ಅಂಚೆ ಪಾಲಕ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಸಿಬ್ಬಂದಿ ನಿರಂಜನಾಮೂರ್ತಿ, ಚೇತನ್, ಮಂಜುನಾಥ್, ಲೋಕೇಶ್, ಪ್ರಕಾಶ್ ಇದ್ದರು.