

ಕುಂದಾಪುರ: ಅಂಚೆ ಜನ ಸಂಪರ್ಕ ಅಭಿಯಾನ ಮತ್ತು ಆಧಾರ್ ನೋಂದಣಿ ಹಾಗೂ ಪರಿಷ್ಕರಣೆ ಕಾರ್ಯಕ್ರಮ ಕಲ್ಪತರು ಕಲಾವಿದರು ಆಲೂರು, ಆಲೂರು ಸರಸ್ವತಿ ಶಾಲೆಯ 95- 96ನೇ ಸಾಲಿನ 7ನೇ ತರಗತಿ ಬ್ಯಾಚ್ ಸದಸ್ಯರು ಮತ್ತು ಆಲೂರು ಗ್ರಾಪಂ ಸಹಯೋಗದೊಂದಿಗೆ ಆಲೂರಿನಲ್ಲಿ ಗುರುವಾರ ನಡೆಯಿತು.
ಆಲೂರು ಗ್ರಾಪಂ ಅಧ್ಯಕ್ಷ ರಾಜೇಶ್ ಎನ್.ದೇವಾಡಿಗ ಕಾರ್ಯಕ್ರಮ ಉದ್ಘಾಟಿಸಿದರು. ಕುಂದಾಪುರ ಅಂಚೆ ಮೇಲ್ವಿಚಾರಕ ಉಮೇಶ್ ಭಂಡಾರಿ, ಪಿಡಿಒ ರೂಪಾ ಗೋಪಿ, ಆಲೂರಿನ ಕಲ್ಪತರು ಕಲಾವಿದರು ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಆಲೂರು ಸರಸ್ವತಿ ಶಾಲೆ 95- 96ನೇ ಸಾಲಿನ 7ನೇ ತರಗತಿ ಬ್ಯಾಚ್ ಸದಸ್ಯರಾದ ದಿನೇಶ್ ಆಚಾರ್ಯ ಮತ್ತು ವಸಂತಿ ಪೂಜಾರಿ ಉಪಸ್ಥಿತರಿದ್ದರು. ರಾಘು ರಟ್ಟಾಡಿ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಪೂಜಾರಿ ವಂದಿಸಿದರು.