ಬನ್ನೂರಿನಲ್ಲಿ ಅಂಚೆ ಚಳವಳಿ

20 dec tnp 02
ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ ಜೈ ಭೀಮ್ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published on

ಬನ್ನೂರು/ತಿ.ನರಸೀಪುರ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ವಜಾಗೊಳಿಸಲು ಆಗ್ರಹಿಸಿ ಬನ್ನೂರು ಪಟ್ಟಣದಲ್ಲಿ ಶುಕ್ರವಾರ ಜೈ ಭೀಮ್ ಹೋರಾಟ ಸಮಿತಿ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.

ಬನ್ನೂರು ಪಟ್ಟಣದ ಸಂತೇಮಾಳ ಬಳಿ ಜಮಾಯಿಸಿದ ಜೈ ಭೀಮ್ ಹೋರಾಟ ಸಮಿತಿ ಪದಾಧಿಕಾರಿಗಳು ಧಿಕ್ಕಾರದ ಘೋಷಣೆಗಳನ್ನು ಕೂಗುತ್ತ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದರು. ಮೈಸೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಕಾವೇರಿ ವೃತ್ತದವರೆಗೆ ತೆರಳಿ ಅರ್ಧ ತಾಸಿಗೂ ಹೆಚ್ಚು ಕಾಲ ರಸ್ತೆ ಸಂಚಾರ ತಡೆ ನಡೆಸಿದರು. ಬಳಿಕ ಅಂಚೆ ಪೆಟ್ಟಿಗೆಗೆ ಕೇಂದ್ರ ಗೃಹ ಸಚಿವರನ್ನು ವಜಾಗೊಳಿಸಿ, ಕಾನೂನಿನಡಿ ಬಂಧಿಸುವಂತೆ ಪ್ರಧಾನಿಗೆ ಮನವಿ ಮಾಡಲಾದ 500ಕ್ಕೂ ಹೆಚ್ಚು ಅಂಚೆ ಪತ್ರಗಳನ್ನು ಪೋಸ್ಟ್ ಮಾಡಿದರು.

ಸಮಿತಿಯ ಅಧ್ಯಕ್ಷ ಯಾಚೇನಹಳ್ಳಿ ರಾಘವೇಂದ್ರ, ಬೀಡನಹಳ್ಳಿ ಮಹದೇವು, ಉಪಾಧ್ಯಕ್ಷ ಹನುಮನಾಳು ಚನ್ನಮಲ್ಲು, ಕಾರ್ಯದರ್ಶಿ ಬಸವನಹಳ್ಳಿ ಮಹದೇವು, ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ಮಹೇಶ್, ಚಾಮನಹಳ್ಳಿ ವೆಂಕಟೇಶ್, ಮುಖಂಡರಾದ ಬೀಡನಹಳ್ಳಿ ಮಂಜು, ಮಾದಿಗಹಳ್ಳಿ ರಾಮು, ಮುದ್ದುರಾಜ್, ಚಿನ್ನಸ್ವಾಮಿ, ಕೃಷ್ಣ, ಅರವಟ್ಟಿಗೆ ಕೊಪ್ಪಲು ಕೃಷ್ಣ, ಎಂ.ಎಲ್.ಹುಂಡಿ ಲಕ್ಷ್ಮೀಕಾಂತ, ಅತ್ತಹಳ್ಳಿ ರವಿ, ತುರಗನೂರು ಆನಂದ, ದೇವರಾಜ್, ಎಂ.ಕೆ ಹಳ್ಳಿ ನಾಗೇಂದ್ರ, ಬೆಟ್ಟಹಳ್ಳಿ ಕೆಂಪರಾಜು, ಬಸವನಹಳ್ಳಿ ಮಹದೇವು, ಲಿಂಗಯ್ಯ, ಬನ್ನೂರು ರಂಗಪ್ಪ, ಯಾಚೇನಹಳ್ಳಿ ಸಿದ್ದರಾಜು, ವೈ.ಜಿ.ರಾಮಚಂದ್ರ, ಚಾಮನಹಳ್ಳಿ ಯಜಮಾನ್, ರಂಗಸ್ವಾಮಿ, ನಿಂಗಣ್ಣ, ಯಡಳ್ಳಿ ರಂಗಸ್ವಾಮಿ, ಅತ್ತಹಳ್ಳಿ ಜಗದೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net