

ಸಿದ್ದಾಪುರ: ಶಿರಸಿ ಅಂಚೆ ವಿಭಾಗದ ಸಿದ್ದಾಪುರದ ಅಂಚೆ ಕಚೇರಿಯಲ್ಲಿ ಸೆ. 20ರಿಂದ 23ರವರೆಗೆ 4 ದಿನಗಳ ಕಾಲ ಅಂಚೆ ಜನಸಂಪರ್ಕ ಅಭಿಯಾನ ಆಯೋಜಿಸಲಾಗಿದ್ದು, ಇದರ ಅಂಗವಾಗಿ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಮೇಳ ನಡೆಯಲಿದೆ ಎಂದು ಶಿರಸಿ ವಿಭಾಗದ ಅಂಚೆ ಅಧೀಕ್ಷಕ ಹೂವಪ್ಪ ಜಿ. ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಭಿಯಾನದಲ್ಲಿ ಅಂಚೆ ಇಲಾಖೆಯ ಸಣ್ಣ ಉಳಿತಾಯ, ವಿಮಾ ಸೇವೆಗಳು, ಆಧಾರ್ ಸೀಡಿಂಗ್ ಸೇರಿ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು. ಅಂಚೆ ಇಲಾಖೆ ಜನಸ್ನೇಹಿ ಆಗುವ ನಿಟ್ಟಿನಲ್ಲಿ ಈಗಾಗಲೇ ಪೋಸ್ಟ್ಮನ್ಗಳ ಮೂಲಕ ಜನರ ಮನೆ ಬಾಗಿಲಿನವರೆಗೆ ತೆರಳಿ ಅಂಚೆ ಸೇವೆಗಳನ್ನು ಒದಗಿಸುತ್ತಿದೆ. ಈ ಅಭಿಯಾನವೂ ಆ ನಿಟ್ಟಿನಲ್ಲಿ ಮತ್ತೊಂದು ದಿಟ್ಟ ಹೆಜ್ಜೆಯಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಮಾಹಿತಿಗಾಗಿ ಸಿದ್ದಾಪುರ ಅಂಚೆ ಕಚೇರಿಯನ್ನು ಸಂರ್ಪಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.