

ಕಿನ್ನಿಗೋಳಿ: ಅಂಚೆ ಕಚೇರಿಗಳು ಸರ್ಕಾರದ ಯೋಜನೆ ಅನುಷ್ಠಾನ ಮಾಡುವಲ್ಲಿ ದೊಡ್ಡ ಕೊಡುಗೆ ನೀಡಿ ಜನ ಸೇವಾ ಕೇಂದ್ರಗಳಾಗಿವೆ ಎಂದು ಕಿನ್ನಿಗೋಳಿ ಅಂಚೆ ಪಾಲಕಿ ಹರಿಣಾಕ್ಷಿ ಹೇಳಿದರು.
ಕಿನ್ನಿಗೋಳಿ ಅಂಚೆ ಕಚೇರಿಯಲ್ಲಿ ಅಂಚೆ ಸಪ್ತಾಹದ ಅಂಗವಾಗಿ ಅಂಚೆ ಮಾಹಿತಿ ಡಾಕ್ ಚೌಪಾಲ್ ಅಂಚೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ಅಂಚೆ ಮೃಲ್ ಓವರ್‌ಸಿಯರ್ ಧನಂಜಯ್ ಐಗಲ್ ಮಾಹಿತಿ ನೀಡಿ, ಪ್ಯಾಕೇಜ್‌ಗಳ ವಿತರಣೆ ಜತೆಗೆ, ಹಣಕಾಸು, ಉಳಿತಾಯ ಯೋಜನೆಗಳು, ಜೀವ ವಿಮೆ ಮತ್ತು ಪಾಸ್‌ಪೋರ್ಟ್ ಸೇವೆಗಳಂತಹ ವಿವಿಧ ಸೇವೆ ಒದಗಿಸುತ್ತವೆ. ಇ-ಅಂಚೆ, ಸ್ಪೀಡ್ ಪೋಸ್ಟ್, ಮನಿ ಆರ್ಡರ್, ರಾಷ್ಟ್ರೀಯ ಉಳಿತಾಯ ಪತ್ರ, ಕಿಸಾನ್ ವಿಕಾಸ್ ಪತ್ರ, ಆಧಾರ್ ಎನೇಬಲ್ ಪೇಮೆಂಟ್ ಸಿಸ್ಟಮ್‌ನಂತಹ ಸೇವೆಗಳನ್ನು ಭಾರತೀಯ ಅಂಚೆ ಜಾಲದ ಅಂಚೆ ಕಚೇರಿಗಳು ನೀಡುತ್ತವೆ ಎಂದರು.
ಇಲಾಖೆಯ ಶಿವದಾಸ್ ಕಟೀಲು, ರೇಖಾ ಶಾಣೈ, ಗೀತಾ, ರವೀಂದ್ರ ಕುಮಾರ್, ಸನತ್ ಶೆಟ್ಟಿ, ರಾಹುಲ್ ನಾಯ್ಕ ಮತ್ತಿತರರಿದ್ದರು. ರಾಮಚಂದ್ರ ಕಾಮತ್ ಕಾರ್ಯಕ್ರಮ ನಿರೂಪಿಸಿದರು.