ಹುದ್ದೆ ಖಾಯಂಗೊಳಿಸಲು ಆಗ್ರಹಿಸಿ ಗ್ರಾಮೀಣ ಅಂಚೆ ಸೇವಕರ ಪ್ರತಿಭಟನೆ

26_11_Mdy_Protest Post Office
Published on

ಮಂಡ್ಯ: ಹುದ್ದೆ ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಸದಸ್ಯರು ನಗರದ ಮಂಡ್ಯ ಅಂಚೆ ಕಚೇರಿಯ ಅಧೀಕ್ಷಕರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಅಂಚೆ ನೌಕರರು ಕರ್ತವ್ಯಕ್ಕೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸೇವಾವಧಿಯಲ್ಲಿ ಮೂರು ಕಾಲ ನಿಗದಿ 12 ವರ್ಷ, 24 ವರ್ಷ, 36 ವರ್ಷ ಬಡ್ತಿ ನೀಡಬೇಕು. ಕೇಂದ್ರ ಸರ್ಕಾರಿ ಅಂಚೆ ನೌಕರರಿಗೆ ನೀಡುವ ವೈದ್ಯಕೀಯ ಸೌಲಭ್ಯವನ್ನು ಗ್ರಾಮೀಣ ಅಂಚೆ ನೌಕರರಿಗೆ ವಿಸ್ತಿರಿಸಬೇಕು. 180 ದಿವಸಗಳ ರಜಾ ನಗದೀಕರಣಕ್ಕೆ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಎನ್.ಕೆ.ಸತೀಶ್‌ಚಂದ್ರ, ಅಧ್ಯಕ್ಷ ಬಿ.ಹೊನ್ನೇಗೌಡ, ಉಪಾಧ್ಯಕ್ಷರಾದ ಬಿ.ವಿ.ಕೃಷ್ಣಮೂರ್ತಿ, ಎಸ್.ಎಂ.ಬಸವರಾಜು, ಸೋಮಶೇಖರ್, ರಾಜೇಶ್, ಖಜಾಂಚಿ ಎಂ.ಕೆ.ಶಿವಲಿಂಗಯ್ಯ, ಕಾರ್ಯದರ್ಶಿ ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net