ಸಾರ್ವಜನಿಕರೊಂದಿಗೆ ಸೌರ್ಜನ್ಯದಿಂದ ವರ್ತಿಸದ ಅಂಚೆ ಕಚೇರಿ ಸಿಬ್ಬಂದಿ

12hgr 1 (1)
ಹಲಗೂರಿನ ಅಂಚೆ ಕಚೇರಿ ಮುಂಭಾಗ ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ ನಡೆಯಿತು.
Published on

ಹಲಗೂರು: ಹೋಬಳಿ ವ್ಯಾಪ್ತಿಯ ಅಂಚೆ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದ್ದು, ತಪ್ಪಿಸಬೇಕೆಂದು ಆಗ್ರಹಿಸಿ ಅಂಚೆ ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ ಹೋಬಳಿ ಘಟಕದ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಸಂಘದ ಅಧ್ಯಕ್ಷ ಎನ್.ಎಲ್. ಭರತ್‌ರಾಜ್ ಮಾತನಾಡಿ, ಅಂಚೆ ಇಲಾಖೆ ಸಾರ್ವಜನಿಕ ಸ್ನೇಹಿಯಾಗಿ ಕೆಲಸ ಮಾಡಬೇಕು. ಜತೆಗೆ ಹಿರಿಯ ನಾಗರೀಕರಿಗೆ ವಿಶೇಷ ಸೇವೆ ಸಲ್ಲಿಸಬೇಕು. ಮಹಿಳೆಯರು ಮತ್ತು ನಾಗರಿಕರ ಜೊತೆ ಸೌಜನ್ಯದಿಂದ ಸಿಬ್ಬಂದಿ ವರ್ತಿಸಬೇಲಿದ್ದು, ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಖಾತೆಯಲ್ಲಿನ ಹಣವನ್ನು ಹಿಂಪಡೆಯುವ ಸಮಯದಲ್ಲಿ ಇಲ್ಲ ಸಲ್ಲದ ನಿಯಮ ಹೇಳಿ ಅತಿರೇಖದಿಂದ ವರ್ತಿಸುತ್ತಾರೆ. ಇದಲ್ಲದೆ ಚಲನ್ ತುಂಬಲು ಹಣ ಪಡೆಯುತ್ತಾರೆ. ಇದರಿಂದ ಅಂಚೆ ಇಲಾಖೆಯ ಬಗ್ಗೆ ಸರ್ವಜನಿಕರಲ್ಲಿದ್ದ ನಂಬಿಕೆ ಹುಸಿಯಾಗಿದೆ. ಆದ್ದರಿಂದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.

ಮನವಿ ಪತ್ರವನ್ನು ಅಂಚೆ ನಿರೀಕ್ಷಕ ಕೆಂಪರಾಜು ಅವರಿಗೆ ಸಲ್ಲಿಸಿದರು. ಸಂಘದ ರಾಜ್ಯ ಸಮಿತಿ ಸದಸ್ಯೆ ಪ್ರಮೀಳಾ, ಹೋಬಳಿ ಅಧ್ಯಕ್ಷ ಮಹದೇವು, ಮಾರಗೌಡನಹಳ್ಳಿ, ಗಣೇಶ್ ಗೊಲ್ಲರಹಳ್ಳಿ, ಚಿಕ್ಕೀರಪ್ಪ ,ಮಂಜು, ಮುತ್ತುರಾಜ್, ಪದ್ಮ, ಮಹಾದೇವು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net