ಅಂಚೆ ಕಚೇರಿಯಲ್ಲಿ ಪಿಂಚಣಿಗಾಗಿ ನೂಕುನುಗ್ಗಲು

110520 Hosapete Q for Penction at Post office
Published on

ಹೊಸಪೇಟೆ: ನಾನಾ ಯೋಜನೆಗಳಡಿ ಪಿಂಚಣಿಯನ್ನೇ ಅವಲಂಬಿಸಿರುವ ವೃದ್ಧರು, ವಿಧವೆಯವರು, ವಿಕಲಚೇತನರು ಸೇರಿ ಇತರರು ನಗರದ ಕೇಂದ್ರೀಯ ಅಂಚೆ ಕಚೇರಿಯ ಬಾಗಿಲಲ್ಲೆ ದೈಹಿಕ ಅಂತರ ಪಾಲಿಸದೆ ನಿಂತಿರುವುದು ಅನೇಕರಲ್ಲಿ ಭೀತಿ ಹೆಚ್ಚಿಸಿದೆ.

ಅಂಚೆ ಕಚೇರಿ ಬಳಿ ಗುಂಪಾಗಿ ಮತ್ತು ಒಬ್ಬರಿಗೊಬ್ಬರು ತಾಗುವಂತೆ ನಿಂತಿದ್ದ ಜನರಿಗೆ ದೈಹಿಕ ಅಂತರ ಕಾಯ್ದುಕೊಳ್ಳಲು ತಿಳಿಸಿದರೂ ಪಾಲನೆಗೆ ಮುಂದಾಗುತ್ತಿಲ್ಲ. ಪಿಂಚಣಿ ಸಿಕ್ಕರೆ ಒಂದಿಷ್ಟು ಜೀವನಕ್ಕೆ ಅನುಕೂಲವಾಗುತ್ತದೆಂದು ಫಲಾನುಭವಿಗಳು ಪಿಂಚಣಿ ಬಂದಿದೆಯೋ ಇಲ್ಲವೋ ಎಂಬುದನ್ನು ತಿಳಿಯಲೂ ಸಹ ನಾಲ್ಕಾರು ತಾಸು ಕಾದು ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.ಸರ್ಕಾರ ಪಿಂಚಣಿದಾರರ ಮನೆಗೆ ಪಿಂಚಣಿ ತಲುಪುವಂತೆ ಕ್ರಮಕೈಗೊಳ್ಳಬೇಕು ಎಂದು ಪಿಂಚಣಿದಾರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net