

ಸೊರಬ: ಪಟ್ಟಣದ ಉಪ ಅಂಚೆ ಕಚೇರಿ ಮತ್ತು ಪಿಎಲ್‌ಡಿ ಬ್ಯಾಂಕ್‌ನಲ್ಲಿ ಭಾನುವಾರ ತಡರಾತ್ರಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಸಾಗರ ರಸ್ತೆಯಲ್ಲಿರುವ ಉಪ ಅಂಚೆ ಕಚೇರಿಯ ಹಿಂಭಾಗದ ಬಾಗಿಲಿನ ಬೀಗ ಮುರಿದು ಕಚೇರಿ ಪ್ರವೇಶಿಸಿದ ಕಳ್ಳರು, ಸಿಸಿ ಕ್ಯಾಮರಾದ ಡಿವಿಆರ್ ಮಾತ್ರ ಹೊತ್ತೊಯ್ದಿದ್ದಾರೆ. ಆದರೆ ಯಾವುದೇ ವಸ್ತುಗಳು ಕಳ್ಳತನವಾದ ಕುರಿತು ವರದಿಯಾಗಿಲ್ಲ. ತಿಂಗಳ ಹಿಂದೆಯೂ ಉಪ ಅಂಚೆ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿತ್ತು. ಸಮೀಪದಲ್ಲಿಯೇ ಇರುವ ಪಿಎಲ್‌ಡಿ ಬ್ಯಾಂಕ್ ಹಿಂಭಾಗದಿಂದ ಕಳ್ಳರು ಕಚೇರಿ ಪ್ರವೇಶ ಮಾಡಿದ್ದಾರೆ. ಯಾವುದೇ ವಸ್ತುಗಳು ಕಳ್ಳತನವಾಗಿಲ್ಲೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಮತ್ತು ಶ್ವಾನದಳದಿಂದ ತಪಾಸಣೆ ನಡೆಸಲಾಯಿತು.