ಅಭಿಮನ್ಯು ಗಡ್ಡದ ಸಾಧಕರ ಸಾಧನೆ ದೊಡ್ಡದು..!

Published on
ಗದಗ: ಅಭಿಮನ್ಯು ಗಡ್ಡದ ಸಾಧಕರ ಸಾಧನೆ ದೊಡ್ಡದು. ಇವರು ಸಾವಿರಾರು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಇನ್ನೊಬ್ಬರಿಗೂ ಪ್ರೇರಣೆ ಮೂಡಿಸಿದ್ದಾರೆ’ ಎಂದು ಪ್ರಧಾನ ಅಂಚೆ ಪಾಲಕರಾದ ಮಂಜುಳಾ ದೇಗಿನಾಳ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಳೀಯ ಪ್ರಧಾನ ಅಂಚೆ ಮಂನರಂಜನಾಕೂಟದಿಂದ 37ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಮೇಳ ಪ್ರಸಕ್ತ ಸಾಲಿನ ಕೇರಳದ ಕ್ಯಾಲಿಕಟ್ ನಗರದಲ್ಲಿ ಆಯೋಜಿಸಿದ ತಬಲಾ ಸೋಲೋ (ಜೂನಿಯರ್ ವಿಭಾಗದಲ್ಲಿ) ಪ್ರಥಮ ಸ್ಥಾನ ಪಡೆದುಕೊಂಡಿರುವ ಅಭಿಮನ್ಯು ಗುಡ್ಡದ್  ಪ್ರಶಸ್ತಿ ಪುರಸ್ಕರಿಗೆ ಸೋಮವಾರ ನಡೆದ ಸನ್ಮಾನದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಅಪರೂಪದ ಸಾಧನೆಯನ್ನು ಈ ಸಾಧಕರು ಮಾಡಿದ್ದಾರೆ
 ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ  ಸಾಧನೆ ತೋರುವ ಪ್ರತಿಭಾವಂತ ಇವರಿಗೆ ಮುಂಬರುವ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ ಎಂದರು.
 ಉಪ ಅಂಚೆ ಪಾಲಕರಾದ ದೊಡ್ಡಪ್ಪ ಇಟಗಿ ಮಾತನಾಡಿ, ವೃತ್ತಿ ಜೀವನದ ಜೊತೆಗೆ ಇಲಾಖೆ ಆಯೋಜಿಸಿರುವ ಇಂತಹ ಸಾಂಸ್ಕ್ರತಿಕ ಮೇಳದಲ್ಲಿ
ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪಾಲಕರ ಶ್ರದ್ಧೆ, ಪ್ರೋತ್ಸಾಹ, ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಾಧನೆ ಸಾಧ್ಯವಾಗಲಿದೆ ಎಂದರು.
 ಪ್ರತಿಯೊಬ್ಬ ಮಗುವಿನಲ್ಲೂ ಪ್ರತಿಭೆ ಅಡಕವಾಗಿರುತ್ತದೆ.  ಮಕ್ಕಳ ಆಸಕ್ತಿ ಬಗೆಗೆ ಅರಿತು ಶಿಸ್ತು ಬದ್ಧ ಅಭ್ಯಾಸ, ಒಳ್ಳೆಯ ಸಂಸ್ಕಾರದಿಂದ ಸಾಧನೆ ತೋರಲು ಸಹಕಾರಿ ಎಂದರು.
ನಮ್ಮ ನಿಮ್ಮಲ್ಲರ ನಡುವೆ ಇರುವ ಇಂತಹ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಮುಂದಾಗಬೇಕು. ಆಗ ಮಾತ್ರ ಕ್ರೀಡೆ, ಸಾಹಿತ್ಯ, ಕಲೆ, ಸಾಂಸ್ಕ್ರತಿಕ ಕ್ಷೇತ್ರಗಳಲ್ಲಿ ಸಾಧಕರು ಹೊರ ಜಗತ್ತಿಗೆ ಪರಿಚಯಿಸಲು ಸಾಧ್ಯವಾಗಲಿದೆ ಎಂದರು.
ಅಂಚೆ ಇಲಾಖೆಯ ಅಧಿಕಾರಿ ಸವಿತಾ ಕುಬಸದ ಮಾತನಾಡಿ,  ಅಂಚೆ ಇಲಾಖೆ ಪಾಲಕರು ಮತ್ತು ಮಕ್ಕಳು ಸಾಂಸ್ಕ್ರತಿಕ ಮೇಳಗಳಲ್ಲಿ ಪಾಲ್ಗೊಳ್ಳುವ ಮನೋಭಾವ ತೋರಬೇಕು. ಆಗ ಉತ್ತರ ಕರ್ನಾಟಕ ಪ್ರತಿಭೆ ವೇದಿಕೆ ದೊರೆಯಲಿದೆ ಎಂದರು.
ಸಾಹಿತಿ ಎಂ.ಟಿ.ಕರಿಗಾರ ಪ್ರಾಸ್ತವಿಕವಾಗಿ ಮಾತನಾಡಿದರು. ವ್ಯಾಪಾರ ವ್ಯವಸ್ಥಾಪಕ ವೆಂಕಟೇಶ ಆಕಳವಾಡಿ, ಮಂಜುಳಾ ಕಡ್ಡಿ, ಸಿದ್ಧಲಿಂಗೇಶ ಯಂಡಿಗೇರಿ, ಸರೋಜ ಪಟ್ಟಣಶೆಟ್ಟರ, ಜಯಣ್ಣ, ರವಿ ಜಾದವ, ಉಮೇಶ ಸಂದಿಮನಿ, ನೀಲಮ್ಮ ದಿಬ್ಬದಮನಿ,
ಮಂಜುನಾಥ ಟಣಕನಕಲ್, ಶಿವಕುಮಾರ ಸುಳ್ಳದ, ವಿದ್ಯಾ ಗದಗ, ರಾಘವೇಂದ್ರ ಕಮ್ಮಾರ, ಪ್ರವೀಣ ಮಲಕಶೆಟ್ಟರ್,  ಲಕ್ಷ್ಮೀ ಮಾದರ ಮತ್ತಿತರರು ಇದ್ದರು.
*****
ಗದಗ ಪ್ರಧಾನ ಅಂಚೆ ಕಚೇರಿಯಲ್ಲಿ  ಕ್ಯಾಲಿಕಟ್ ನಗರದಲ್ಲಿ ಆಯೋಜಿಸಿದ ತಬಲಾ ಸೋಲೋ (ಜೂನಿಯರ್ ವಿಭಾಗದಲ್ಲಿ) ಪ್ರಥಮ ಸ್ಥಾನ ಪಡೆದುಕೊಂಡಿರುವ ಅಭಿಮನ್ಯು ಗುಡ್ಡದ್  ಪ್ರಶಸ್ತಿ ಪುರಸ್ಕರಿಗೆ ಅಂಚೆ ಉಪ ಅಂಚೆ ಪಾಲಕರಾದ ದೊಡ್ಡಪ್ಪ ಇಟಗಿ ಸನ್ಮಾನ ಮಾಡಿದರು. ಮಂಜುಳಾ ದೇಗಿನಾಳ, ಎಂ.ಟಿ.ಕರಿಗಾರ ಚಿತ್ರದಲ್ಲಿದ್ದಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net