

ಮಂಡ್ಯ: ಬೆಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ 6 ಉಪ ನಿರ್ದೇಶಕರ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಮೇಜರ್/ಲೆಫ್ಟಿನೆಂಟ್ ಕರ್ನಲ್ ಅಥವಾ ನೌಕಾಸೇನಾ ಮತ್ತು ವಾಯು ಸೇನೆಯಲ್ಲಿ ತತ್ಸಮಾನ ರ್ಯಾಂಕ್ನಿಂದ ಬಿಡುಗಡೆ/ ನಿವೃತ್ತಿ ಹೊಂದಿರುವ 2024 ಜ.1ಕ್ಕೆ 52 ವರ್ಷದೊಳಗಿನ ವಯೋಮಾನದ ಎಸ್ಎಸ್ಎಲ್ಸಿ/ತತ್ಸಮಾನ ತರಗತಿಯಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿ ತೇರ್ಗಡೆಯಾದ ಸೈನ್ಯಾಧಿಕಾರಿಗಳು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮೈಸೂರು ಕಚೇರಿಯಲ್ಲಿ ಅರ್ಜಿ ಪಡೆದು ಅಗತ್ಯ ದಾಖಲೆಯೊಂದಿಗೆ ಸೆ.16ರೊಳಗೆ ಮೈಸೂರು ಕಚೇರಿಗೆ ಸಲ್ಲಿಸಬಹುದು. ಮಾಹಿತಿಗೆ ದೂ.ಸಂ 080-25589459 ಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.