ಸ್ನಾತಕೋತ್ತರ ತರಗತಿ ಆರಂಭಕ್ಕೆ ಕ್ರಮ ವಹಿಸಿ

16mnv07
Published on

ಮಾನ್ವಿ: ಕಾಲೇಜಿನಲ್ಲಿ ಅಗತ್ಯ ಮೂಲ ಸೌಲಭ್ಯ ಒದಗಿಸಲಾಗುವುದು ಎಂದು ಶಾಸಕ ಹಂಪಯ್ಯನಾಯಕ ಹೇಳಿದರು.

ಪಟ್ಟಣದ ಬಾಷುಮಿಯ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರೊಂದಿಗೆ ಶನಿವಾರ ಚರ್ಚೆ ನಡೆಸಿ ಮಾತನಾಡಿದರು. ತಾಲೂಕಿನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರ ಜೀವನವನ್ನು ಉಜ್ವಲಗೊಳಿಸುವ ಅಗತ್ಯ ಇದ್ದು, ಅದಕ್ಕಾಗಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಕಾಲೇಜಿನಲ್ಲಿ ರಾಯಚೂರು ವಿಶ್ವವಿದ್ಯಾಲಯದಡಿ ಪಿಜಿ ಕೋರ್ಸ್‌ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳುವಂತೆ ಪ್ರಾಚಾರ್ಯ ಜೆ.ಎಲ್.ಈರಣ್ಣಗೆ ಶಾಸಕರ ಹಂಪಯ್ಯ ನಾಯಕ ಸೂಚಿಸಿದರು. ಪ್ರಾಚಾರ್ಯ ಜೆ.ಎಲ್.ಈರಣ್ಣ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಕಾರ್ಯಕ್ರಮಗಳ ಆಯೋಜನೆಗೆ ಸುಸಜ್ಜಿತವಾದ ಸಭಾಂಗಣ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಕಾಲೇಜಿಗೆ ನ್ಯಾಕ ಕಮಿಟಿ ಭೇಟಿ ನೀಡಿ ಪರಿಶೀಲನೆ ನಡೆಸಲಿರುವುದರಿಂದ ಈ ಕುರಿತು ಸಿದ್ಧತೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಗುರುನಾಥ ನಾಯಕ, ಡಿ.ಜಿ.ಕರ್ಕಿಹಳ್ಳಿ, ಸೈಯದ್ ಅಕ್ಬರ್ ಸಾಬ್, ಮಧುಕುಮಾರಿ ಪಾಂಡೆ, ರೇವಣಸಿದ್ದಯ್ಯ ಹಿರೇಮಠ, ಸಿದ್ದಪ್ಪಗೌಡ ಅಲ್ದಾಳ, ಪುರಸಭೆ ಸದಸ್ಯ ಶರಣೇಗೌಡ ಗವಿಗಟ್, ಬೀರಪ್ಪ ಬಲ್ಲಟಗಿ, ಶಂಕರ ಜಗ್ಲಿ, ಆಂಜನೇಯ ನಾಯಕ್, ಉಪನ್ಯಾಸಕರು, ಸಿಬ್ಬಂದಿ ಇದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net